ಬಿಜೆಪಿ-ಜೆಡಿಎಸ್ ವಿಲೀನ ವದಂತಿ ಹರಡಿಸಿದ್ದು ಯಾಕೆ ಗೊತ್ತಾ? | ದಳಪತಿಗಳು ಅಂದ್ರೆ ಸುಮ್ನೆನಾ..!? - Mahanayaka

ಬಿಜೆಪಿ-ಜೆಡಿಎಸ್ ವಿಲೀನ ವದಂತಿ ಹರಡಿಸಿದ್ದು ಯಾಕೆ ಗೊತ್ತಾ? | ದಳಪತಿಗಳು ಅಂದ್ರೆ ಸುಮ್ನೆನಾ..!?

21/12/2020

ಬೆಂಗಳೂರು: ಬಿಜೆಪಿ ಜೊತೆ ಜೆಡಿಎಸ್ ವಿಲೀನ ಸುದ್ದಿ, ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಆದರೆ ಈ ವದಂತಿ ತನ್ನಿಂದ ತಾನೇ ಆಗಿರುವುದಲ್ಲ. ಇದು ವ್ಯವಸ್ಥಿತವಾಗಿ ಹರಡಿಸಲಾಗಿರುವ ವದಂತಿ ಎಂದು ಹೇಳಲಾಗುತ್ತಿದೆ.

 

ಈ ವದಂತಿಯು ಗೊಂದಲ ಸೃಷ್ಟಿಸುವ ವ್ಯವಸ್ಥಿತ ಗೇಮ್ ಪ್ಲಾನ್ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಜೆಡಿಎಸ್ ನ ಕೆಲವು ಶಾಸಕರು ಬಿಜೆಪಿ ಹಾಗೂ ಕಾಂಗ್ರೆಸ್ ಸೇರಲು ಮುಂದಾಗುತ್ತಿದ್ದಂತೆಯೇ ಈ ವದಂತಿಯು ಹರಡಿದೆ.


Provided by

 

ದಳಪತಿಗಳು ಉರುಳಿಸಿದ ದಾಳ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಸೇರಲು ಮುಂದಾಗಿದ್ದ ಶಾಸಕರನ್ನು ಗೊಂದಲಕ್ಕೀಡು ಮಾಡುವಲ್ಲಿ ಯಶಸ್ವಿಯಾಗಿದೆ. ವರದಿಗಳ ಪ್ರಕಾರ ಹೆಚ್.ಡಿ.ಕುಮಾರಸ್ವಾಮಿ ಅವರ ಆಪ್ತರೇ ಈ ವಿಲೀನ ಸುದ್ದಿಯನ್ನು ಹರಿಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಪರ ಫೇಸ್ ಬುಕ್ ಪೇಜ್ ವೊಂದರಲ್ಲಿ ಕೂಡ ಬಿಜೆಪಿ ಜೊತೆ ಜೆಡಿಎಸ್ ವಿಲೀನ ಎಂಬ ಮಾಧ್ಯಮವೊಂದರ ಸುದ್ದಿಯ ಸ್ಕ್ರೀನ್ ಶಾಟ್ ಕೂಡ ಶೇರ್ ಮಾಡಲಾಗಿತ್ತು ಇವೆಲ್ಲವೂ ಪ್ಲಾನ್ ಆಗಿ ನಡೆದಿದೆ ಎನ್ನುವ ಅನುಮಾನಗಳು ಇದೀಗ ಬಲವಾಗಿದೆ.

 

ದಳಪತಿಗಳು ಉರುಳಿಸಿದ ದಾಳಕ್ಕೆ ಬಿಜೆಪಿಯಲ್ಲಿಯೇ ತಳಮಳ ಉಂಟಾಗಿತ್ತು. ಮೊದಲೇ ಬೇರೆ ಪಕ್ಷಗಳಿಂದ ಬಂದಿರುವವರನ್ನು ಸಮಾಧಾನಪಡಿಸಲು ಹೆಣಗಾಡುತ್ತಿರುವ ಸಂದರ್ಭದಲ್ಲಿಯೇ ಜೆಡಿಎಸ್ ಕೂಡ ಬಿಜೆಪಿಯಲ್ಲಿ ವಿಲೀನವಾಗಲಿದೆ ಎಂಬ ಸುದ್ದಿ ಬಿಜೆಪಿಯೊಳಗೂ ತಳಮಳ ಸೃಷ್ಟಿಸಿತ್ತು. ಹೀಗಾಗಿಯೇ ವದಂತಿ ಹರಡಿದ ತಕ್ಷಣವೇ ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಪಷ್ಟಣೆ ನೀಡಿದ್ದಾರೆ.

 

ಜೆಡಿಎಸ್ ಶಾಸಕರು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಗಳು ಕಂಡು ಬರುತ್ತಿದ್ದಂತೆಯೇ, ದಳಪತಿಗಳು ಜೆಡಿಎಸ್-ಬಿಜೆಪಿ ವಿಲೀನ ಎಂಬ ದಾಳವನ್ನು ಉರುಳಿಸಿದ್ದಾರೆ. ಈ ವಿಚಾರ ಈಗಲೂ ಗೊಂದಲ ಅನುಮಾನಗಳಲ್ಲಿಯೇ ಉಳಿದಿದೆ. ಬಿಜೆಪಿ-ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳಲು ಸಿದ್ದರಾಗಿದ್ದ ಶಾಸಕರನ್ನು ಗೊಂದಲಕ್ಕೀಡು ಮಾಡಿದ್ದು, ಸದ್ಯಕ್ಕೆ ಜೆಡಿಎಸ್ ಸೇಫ್… ರಾಜಕೀಯ ಅಂದ್ರೆ ಇದೇ ಅಲ್ವಾ…

ಇತ್ತೀಚಿನ ಸುದ್ದಿ