ಪುನೀತ್ ರಾಜ್ ಕುಮಾರ್ ಕೊನೆಯ ಚಿತ್ರ ‘ಜೇಮ್ಸ್’ಗೆ ಅಭಿಮಾನಿಗಳ ಸ್ವಾಗತ ಹೇಗಿತ್ತು? - Mahanayaka

ಪುನೀತ್ ರಾಜ್ ಕುಮಾರ್ ಕೊನೆಯ ಚಿತ್ರ ‘ಜೇಮ್ಸ್’ಗೆ ಅಭಿಮಾನಿಗಳ ಸ್ವಾಗತ ಹೇಗಿತ್ತು?

jems
17/03/2022

ಜೇಮ್ಸ್  ಚಿತ್ರ ಬಿಡುಗಡೆಯಾಗಿರುವುದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಒಂದೆಡೆ ಸಂತಸ ತಂದಿದ್ದರೆ, ಇನ್ನೊಂದೆಡೆ ಅಪ್ಪು ಇಲ್ಲ ಎನ್ನುವ ನೋವು ಖಂಡಿತವಾಗಿಯೂ ಕಾಡಿದೆ. ಇಂದು ಕರ್ನಾಟಕದಾದ್ಯಂತ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಗೆ ಅಭಿಮಾನಿಗಳಿಂದ ಅದ್ದೂರಿಯ ಸ್ವಾಗತ ದೊರೆತಿದೆ.

70 ಅಡಿ ಎತ್ತರ ಕಟೌಟ್ ಗೆ ಹೆಲಿಕಾಫ್ಟರ್ ಮೂಲಕ ಪುಷ್ಪವೃಷ್ಠಿ

ಮೈಸೂರಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ 70 ಅಡಿ ಎತ್ತರದ ಅಪ್ಪು ಕಟೌಟ್‌ ಅನ್ನು ಚಿತ್ರಮಂದಿರದ ಬಳಿ ನಿಲ್ಲಿಸಲಾಗಿದ್ದು, ಆ ಕಟೌಟ್‌ ಗೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದರು.

ಸಿನಿಮಾಮಂದಿರಗಳು ಇರುವ ಮೈಸೂರಿನ ರಸ್ತೆಗಳು ಅಪ್ಪು ಭಾವಚಿತ್ರದಿಂದ‌ ಕಂಗೊಳಿಸುತ್ತಿತ್ತು. ಎಲ್ಲಿ ನೋಡಿದರೂ ಅಪ್ಪು ಕಟೌಟ್ ರಾರಾಜಿಸುತ್ತಿತ್ತು. ಚಿತ್ರಮಂದಿರದ ಸುತ್ತ ಅಪ್ಪು ಚಿತ್ರ ಹಾಗೂ ಅವರ ಸಿನಿಮಾ ಹೆಸರು ಇರುವ ಟಿ -ಶರ್ಟ್ ಗಳನ್ನು ಅಭಿಮಾನಿಗಳು ಧರಿಸಿಕೊಂಡು ಸಂಭ್ರಮಿಸಿದರು.

ಪುನೀತ್ ರಾಜ್ ಕುಮಾರ್ ಕಂಚಿನ ಪ್ರತಿಮೆ ಸ್ಥಾಪನೆ

ಪವರ್ ಸ್ಟಾರ್, ಕರುನಾಡ ರತ್ನ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಇಂದು. ಎಂಸಿಸಿ ಬಿ ಬ್ಲಾಕ್ ನ ಈಜುಕೊಳ ಪಕ್ಕದ ಪಾರ್ಕ್‌ನಲ್ಲಿ ಕಂಚಿನ ಪ್ರತಿಮೆ ಅನಾವರಣಗೊಳಿಸಲಾಯಿತು.

ಪುನೀತ್ ರಾಜ್ ಕುಮಾರ್ ಮತ್ತು ಜಿ.ಎಸ್.ಮಂಜುನಾಥ್ ಅಭಿಮಾನಿಗಳ ಬಳಗದಿಂದ ದಾವಣಗೆರೆ ನಗರದ 38ನೇ ವಾರ್ಡ್‌ನ ಎಂ.ಸಿ.ಸಿ. ‘ಬಿ’ ಬ್ಲಾಕ್‌ನ ಸ್ವಿಮ್ಮಿಂಗ್ ಫೂಲ್ ಆವರಣದಲ್ಲಿ ನಿರ್ಮಿಸಿರುವ ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆಯನ್ನು ಕಾಂಗ್ರೆಸ್ ಹಿರಿಯ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಅನಾವರಣಗೊಳಿಸಿದರು.

ಇಂದು ಅಭಿಮಾನಿಗಳ ದಿನ ಮಾಡಬೇಕು ಎಂದ ಸಾಧುಕೋಕಿಲ

ಹಾಸ್ಯ ನಟ ಸಾಧುಕೋಕಿಲ‌ ಕಂಠೀರವ ಸ್ಟುಡಿಯೋಗೆ ಆಗಮಿಸಿ, ಪುನೀತ್ ಸಮಾಧಿ‌ ದರ್ಶನ ಪಡೆದಿದ್ದು, ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು. ಇಂದಿನ ದಿನವನ್ನು ಅಭಿಮಾನಿಗಳ ದಿನವನ್ನಾಗಿ ಘೋಷಿಸಬೇಕು. ಇವತ್ತು ಅಪ್ಪು ಸಿನಿಮಾ ಜೇಮ್ಸ್ ರಿಲೀಸ್ ಆಗಿರೋದು ಸಂತೋಷ ತಂದಿದೆ. ಉತ್ಸವದ ರೀತಿಯಲ್ಲಿ ಸಿನಿಮಾ,ಜನ್ಮ ದಿನವನ್ನು‌ ಆಚರಿಸಲಾಗುತ್ತಿದೆ. ಅವರು ಎಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ, ನೋಡಿ ಖುಷಿ ಆಗುತ್ತಿದೆ ಎಂದರು.

ಅಪ್ಪು ಇಲ್ಲದ ಹುಟ್ಟು ಹಬ್ಬ ನನಗೆ ದುಃಖ ತಂದಿದೆ: ಶಿವರಾಜ್ ಕುಮಾರ್

ಈ ವರ್ಷ ಅಪ್ಪು ಇಲ್ಲದ ಹುಟ್ಟು ಹಬ್ಬ ನನಗೆ ದುಃಖ ತಂದಿದೆ, ಹುಟ್ಟುಹಬ್ಬಕ್ಕೆ ಇಬ್ಬರೂ ಗಿಫ್ಟ್​ ಶೇರ್​ ಮಾಡಿಕೊಳ್ತಿದ್ವಿ.ಜೇಮ್ಸ್​ ಡಬ್ಬಿಂಗ್​​ ಮಾಡುವ ವೇಳೆ ತುಂಬಾ ನೋವಾಯ್ತು ಎಂದು ನಟ ಶಿವರಾಜ್​​ಕುಮಾರ್​​​ ಹೇಳಿದ್ದಾರೆ.

ಅಪ್ಪು ಜನ್ಮದಿನ, ಜೇಮ್ಸ್ ಚಿತ್ರ ಬಿಡುಗಡೆಯ ಹಬ್ಬದ ನಡುವೆ ಮೈಸೂರಿಗೆ ಬೆಳಗ್ಗೆಯೇ ಆಗಮಿಸಿದ ನಟ ಶಿವರಾಜ್ ಕುಮಾರ್ ಶಕ್ತಿಧಾಮಕ್ಕೆ ಭೇಟಿ ನೀಡಿದರು.

ಅದಕ್ಕೂ ಮುನ್ನ ಥಿಯೇಟರ್ ಗೆ ತೆರಳಿ ಅಲ್ಲಿ ಅಪ್ಪುವಿನ ಚಿತ್ರವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುವುದನ್ನು ನೋಡಿ ಖುಷಿಪಟ್ಟರು, ಅಭಿಮಾನಿಗಳತ್ತ ಕೈಬೀಸಿದರು. ಶೇಕ್ ಹ್ಯಾಂಡ್ ಮಾಡಿದರು.

ಪ್ರತಿಯೊಬ್ಬರಿಗೂ ಆರಂಭ ಕೊನೆ ಅನ್ನೋದು ಇದೆ: ರಾಘವೇಂದ್ರ ರಾಜ್ ಕುಮಾರ್

ನನಗೆ ನನ್ನ ತಂದೆ ಡಾ.ರಾಜ್ ಕುಮಾರ್ ಅವರು ಅಣ್ಣ ತಮ್ಮಂದಿರ ಬಗ್ಗೆ ಹೊಗಳಿಕೊಳ್ಳಬಾರದು ಎಂದು ಹೇಳಿದ್ದರು. ಹಾಗಾಗಿ ಇವತ್ತು ನಾನು ಜೇಮ್ಸ್ ಚಿತ್ರ ನೋಡಿ ಅಪ್ಪುವನ್ನು ಹೊಗಳುವುದಿಲ್ಲ, ನನ್ನ ತಮ್ಮ ಏನೇ ಮಾಡಿದರೂ ನನಗೆ ಮೆಚ್ಚುಗೆಯಾಗುತ್ತದೆ, ಅವನನ್ನು ನೋಡಿ, ಅವನ ಚಿತ್ರ ನೋಡಿ ಪ್ರೇಕ್ಷಕರು, ಅಭಿಮಾನಿಗಳು ಹೇಳಬೇಕು ಇದು ಜೇಮ್ಸ್ ಚಿತ್ರ ಬಿಡುಗಡೆಯಾದ ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮಜಯಂತಿಯಂದು ಫಸ್ಟ್ ಡೇ ಫಸ್ಟ್ ಶೋ ನೋಡಿದ ಬಳಿಕ ರಾಘವೇಂದ್ರ ರಾಜ್ ಕುಮಾರ್ ಹೇಳಿದರು.

ಪ್ರತಿಯೊಬ್ಬರಿಗೂ ಜೀವನದಲ್ಲಿ ಆರಂಭ-ಕೊನೆ ಎಂಬುದು ಇರುತ್ತದೆ. ನಮಗೆ ಅಪ್ಪುವನ್ನು ಕಳೆದುಕೊಂಡ ನೋವು ಇರುತ್ತದೆ, ಹಲವು ಮನೆಗಳಲ್ಲಿ 20 ವರ್ಷದಲ್ಲಿ, 25 ವರ್ಷದಲ್ಲಿ, 30 ವರ್ಷದಲ್ಲಿ ಹೋಗಿಬಿಡುತ್ತಾರೆ, ಅಂಥವರ ಕಷ್ಟ, ನೋವು ನೋಡಿ, ನಮಗೆ ನಮ್ಮ ಮನೆಯ ಸದಸ್ಯರನ್ನು ಕಳೆದುಕೊಂಡಾಗ ನೋವು ಗೊತ್ತಾಗುವುದು, ಎಲ್ಲರಿಗೂ ನೋವಾಗಿದೆ, ನಮಗೂ ಕಷ್ಟವಾಗುತ್ತಿದೆ ಎಂದು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಈ ಆಹಾರಗಳನ್ನು ಸೇವಿಸಿ

ಚಂಡಮಾರುತದ ಹೊಡೆತಕ್ಕೆ ಮುಳುಗಿದ 30 ಸಿಬ್ಬಂದಿ ಇದ್ದ ಯುಎಇ ಹಡಗು

ಪಡೀಲ್- ಕುಲಶೇಖರ ಜೋಡಿ ರೈಲು ಮಾರ್ಗ ಕಾಮಗಾರಿ: ಮಾರ್ಚ್​ 20ರವರೆಗೆ  ರೈಲು ಸಂಚಾರ ಸ್ಥಗಿತ

ಬಾಲಕಿಯ  ಮೇಲೆ ಲೈಂಗಿಕ ದೌರ್ಜನ್ಯ: ಪಾದ್ರಿಯ  ಬಂಧನ

ಹೆತ್ತ ಕಂದಮ್ಮನ್ನು ಜೀವಂತ ಸಮಾಧಿ ಮಾಡಿದ ತಾಯಿ

ಇತ್ತೀಚಿನ ಸುದ್ದಿ