1 ವರ್ಷದ ಬೆಲೆ ಖಾತರಿಯೊಂದಿಗೆ ಜಿಯೋ ಪ್ರೈಮ್ ಮರು ಪರಿಚಯ!
ಮುಂಬೈ: ರಿಲಯನ್ಸ್ ಜಿಯೋ ತನ್ನ 10ನೇ ವಾರ್ಷಿಕೋತ್ಸವದ ನೆನಪಿಗಾಗಿ ಗ್ರಾಹಕರಿಗೆ ಬಿಗ್ ಆಫರ್ ಘೋಷಿಸಿದೆ. ಆರಂಭದಲ್ಲಿ ತನ್ನ ಮೊದಲ 100 ಮಿಲಿಯನ್ ಗ್ರಾಹಕರಿಗೆ ನೀಡಲಾಗಿದ್ದ ‘ಜಿಯೋ ಪ್ರೈಮ್’ ಸದಸ್ಯತ್ವ ಕಾರ್ಯಕ್ರಮವನ್ನು ಈಗ 500 ಮಿಲಿಯನ್ಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಜಿಯೋ ಕುಟುಂಬಕ್ಕಾಗಿ ಮತ್ತೆ ಜಾರಿಗೆ ತರಲಾಗಿದೆ. ಆಗಸ್ಟ್ 20 ರಿಂದ ಜಿಯೋ ಪ್ರೈಮ್ ಸದಸ್ಯತ್ವವು ಗ್ರಾಹಕರಿಗೆ ಲಭ್ಯವಾಗಲಿದೆ.
1 ವರ್ಷದ ಬೆಲೆ ಖಾತರಿ (Price Guarantee):
ಜಿಯೋ ಪ್ರೈಮ್ ಪಡೆದುಕೊಳ್ಳುವ ಗ್ರಾಹಕರು ತಮ್ಮ ಆದ್ಯತೆಯ ಯೋಜನೆಗಳನ್ನು ಇಂದಿನ ಬೆಲೆಯಲ್ಲೇ ರೀಚಾರ್ಜ್ ಮಾಡಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಕಂಪನಿಯು ರೀಚಾರ್ಜ್ ದರಗಳನ್ನು ಹೆಚ್ಚಿಸಿದರೂ, ಪ್ರೈಮ್ ಚಂದಾದಾರರಿಗೆ 5 ಸೆಪ್ಟೆಂಬರ್ 2027 ರವರೆಗೆ ಯಾವುದೇ ದರ ಏರಿಕೆ ಅನ್ವಯಿಸುವುದಿಲ್ಲ.
₹ 299 ಪ್ಲಾನ್ ಮುಂದುವರಿಕೆ:
ಇತ್ತೀಚೆಗೆ ಏರ್ಟೆಲ್ ತನ್ನ ₹299 ಪ್ಲಾನ್ ಸ್ಥಗಿತಗೊಳಿಸಿದ್ದರೂ, ಜಿಯೋ ಮಾತ್ರ ತನ್ನ ಅತ್ಯಂತ ಜನಪ್ರಿಯ ₹299 ಪ್ರಿಪೇಡ್ ಪ್ಲಾನ್ ಸೇರಿದಂತೆ ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ ಪ್ರಮುಖ ಟ್ಯಾರಿಫ್ ಯೋಜನೆಗಳನ್ನು ಗ್ರಾಹಕರಿಗೆ ಮುಂದುವರಿಸಲು ನಿರ್ಧರಿಸಿದೆ.
ಹೆಚ್ಚುವರಿ ಪ್ರಯೋಜನಗಳು:
ಒಟ್ಟು ₹ 600 ಮೌಲ್ಯದ ಕ್ಯಾಶ್ಬ್ಯಾಕ್ ವೋಚರ್ಗಳು ಸಿಗಲಿವೆ. ಹೊಸ ಜಿಯೋಹೋಮ್ ಅಥವಾ ಜಿಯೋಪಿಸಿ ಸಂಪರ್ಕದಲ್ಲಿ ₹ 300 ಕ್ಯಾಶ್ ಬ್ಯಾಕ್ ವೋಚರ್ ಅನ್ನು ರಿಡೀಮ್ ಮಾಡಬಹುದು.
ಸ್ನೇಹಿತರು ಅಥವಾ ಕುಟುಂಬಕ್ಕಾಗಿ ಹೊಸ ಜಿಯೋ ಸಿಮ್ ಸಂಪರ್ಕವನ್ನು ಸೇರಿಸಲು ₹ 300 ಕ್ಯಾಶ್ ಬ್ಯಾಕ್ ವೋಚರ್ ಸಿಗಲಿದೆ.
ಜಿಯೋದ ನೂತನ ಉತ್ಪನ್ನಗಳು, ಸೇವೆಗಳು ಮತ್ತು ಪ್ರಯೋಗಗಳಿಗೆ ಆರಂಭಿಕ ಪ್ರವೇಶಾವಕಾಶ ಹಾಗೂ ಆದ್ಯತೆಯ ಗ್ರಾಹಕ ಬೆಂಬಲ ಲಭ್ಯವಿರುತ್ತದೆ.
ಅಸ್ತಿತ್ವದಲ್ಲಿರುವ ಎಲ್ಲಾ ಜಿಯೋ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಗ್ರಾಹಕರಿಗೆ ಕೇವಲ ₹300 ಜಾಯಿನ್ ಶುಲ್ಕದಲ್ಲಿ ಈ ಸದಸ್ಯತ್ವ ಲಭ್ಯವಿದೆ. ಇತರ ನೆಟ್ವರ್ಕ್ನಲ್ಲಿರುವ ಗ್ರಾಹಕರು ಜಿಯೋಗೆ ಪೋರ್ಟ್ ಆಗುವ ಮೂಲಕ ಅಥವಾ ಹೊಸ ಜಿಯೋ ಸಂಪರ್ಕವನ್ನು ಸಕ್ರಿಯಗೊಳಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು.
ಮೈಜಿಯೋ ಆ್ಯಪ್, Jio.com, ಜಿಯೋ ಸ್ಟೋರ್ಸ್ ಮತ್ತು ಜಿಯೋ ಪಾರ್ಟ್ನರ್ ಸ್ಟೋರ್ಗಳ ಮೂಲಕ ಈ ಸದಸ್ಯತ್ವ ಲಭ್ಯವಿರುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























