ಜಿಯೋ ಬಳಕೆದಾರರಿಗೆ 18 ತಿಂಗಳು ಉಚಿತವಾಗಿ ಸಿಗಲಿದೆ ಗೂಗಲ್ ಎಐ ಪ್ರೊ - Mahanayaka

ಜಿಯೋ ಬಳಕೆದಾರರಿಗೆ 18 ತಿಂಗಳು ಉಚಿತವಾಗಿ ಸಿಗಲಿದೆ ಗೂಗಲ್ ಎಐ ಪ್ರೊ

google ai pro
03/11/2025

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಗೂಗಲ್  ಗುರುವಾರದಂದು ಪ್ರಮುಖ ಕಾರ್ಯತಂತ್ರ ಪಾಲುದಾರಿಕೆ ಘೋಷಿಸಿದ್ದು, ಇದರ ಅಡಿಯಲ್ಲಿ ಭಾರತದಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆಯನ್ನು ವೇಗವಾಗಿ ವಿಸ್ತರಿಸಲು ಎರಡೂ ಕಂಪನಿಗಳು ಒಟ್ಟಾಗಿ ಕೆಲಸ ಮಾಡುತ್ತವೆ.

ಈ ಪಾಲುದಾರಿಕೆ ಪ್ರಮುಖ ಅಂಶವೆಂದರೆ ಜಿಯೋ ಬಳಕೆದಾರರು 18 ತಿಂಗಳವರೆಗೆ ಗೂಗಲ್ ಎಐ ಪ್ರೊ (Google AI Pro) ಪ್ಲಾನ್ ಗೆ ಉಚಿತ ಬಳಕೆ ಅವಕಾಶವನ್ನು ಪಡೆಯುತ್ತಾರೆ.

ಈ ಆಫರ್ ಪ್ರತಿ ಬಳಕೆದಾರರಿಗೆ ಸುಮಾರು ರೂ. 35,100 ಮೌಲ್ಯದ್ದಾಗಿದೆ. ಗೂಗಲ್ ಜೆಮಿನಿ 2.5 ಪ್ರೊ, ಇತ್ತೀಚಿನ ನ್ಯಾನೋ ಬನಾನಾ ಮತ್ತು ವಿಯೋ 3.1 ಮಾದರಿಗಳೊಂದಿಗೆ ಅದ್ಭುತ ಚಿತ್ರಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸಲು ಬಳಕೆದಾರರಿಗೆ ವಿಸ್ತೃತ ಅವಕಾಶಗಳು ದೊರೆಯುತ್ತವೆ.

ಅಧ್ಯಯನ ಮತ್ತು ಸಂಶೋಧನೆಗಾಗಿ ನೋಟ್‌ ಬುಕ್ ಎಲ್ ಎಂಗೆ ಹೆಚ್ಚಿನ ಪ್ರವೇಶ ಮತ್ತು 2 ಟಿಬಿ ಕ್ಲೌಡ್ ಸ್ಟೋರೇಜ್‌ನಂತಹ ಪ್ರೀಮಿಯಂ ಸೇವೆಗಳನ್ನು ಸಹ ಈ ಆಫರ್‌ ನಲ್ಲಿ ಸೇರಿಸಲಾಗಿದೆ.

ಆರಂಭದಲ್ಲಿ ಈ ವೈಶಿಷ್ಟ್ಯವು 18 ರಿಂದ 25 ವರ್ಷ ವಯಸ್ಸಿನ ಜಿಯೋ ಬಳಕೆದಾರರಿಗೆ ಲಭ್ಯವಿರುತ್ತದೆ. ಆದರೆ ನಂತರ ಜಿಯೋದ ಎಲ್ಲ ಬಳಕೆದಾರರು ಇದಕ್ಕೆ ಅವಕಾಶವನ್ನು ಪಡೆಯುತ್ತಾರೆ.

ಕಂಪನಿಯು ಈ ಎಐ ವೈಶಿಷ್ಟ್ಯವನ್ನು 5ಜಿ ಅನ್‌ ಲಿಮಿಟೆಡ್ ಯೋಜನೆಗಳನ್ನು ಹೊಂದಿರುವ ಜಿಯೋ ಗ್ರಾಹಕರಿಗೆ ಮಾತ್ರ ಒದಗಿಸುತ್ತದೆ. ರಿಲಯನ್ಸ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಇಂಟೆಲಿಜೆನ್ಸ್ ಲಿಮಿಟೆಡ್ ಮತ್ತು ಗೂಗಲ್ ಜಂಟಿಯಾಗಿ ಈ ವಿಶೇಷ ಎಐ ವೈಶಿಷ್ಟ್ಯವನ್ನು ಜಿಯೋ ಗ್ರಾಹಕರಿಗೆ ತಂದಿವೆ. ಪ್ರತಿ ಭಾರತೀಯ ಗ್ರಾಹಕ, ಸಂಸ್ಥೆ ಮತ್ತು ಡೆವಲಪರ್ ಅನ್ನು ಎಐನೊಂದಿಗೆ ಜೋಡಿಸುವುದು ಇದರ ಗುರಿಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ