ಸೆರೆಯಾಗುವುದಕ್ಕೂ ಮುನ್ನ ಸಾಕಾನೆಗಳ ಕ್ಯಾಂಪ್ ಗೆ ಬಂದು ಲುಕ್ ಕೊಟ್ಟಿದ್ದ ನರಹಂತಕ ಆನೆ! - Mahanayaka
12:05 AM Wednesday 12 - November 2025

ಸೆರೆಯಾಗುವುದಕ್ಕೂ ಮುನ್ನ ಸಾಕಾನೆಗಳ ಕ್ಯಾಂಪ್ ಗೆ ಬಂದು ಲುಕ್ ಕೊಟ್ಟಿದ್ದ ನರಹಂತಕ ಆನೆ!

wild elephant
03/11/2025

ಚಿಕ್ಕಮಗಳೂರು :  ಶೃಂಗೇರಿಯಲ್ಲಿ ಇಬ್ಬರನ್ನ ಬಲಿ ಪಡೆದ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಕಾಡಾನೆಯನ್ನು ಸೆರೆ ಹಿಡಿಯುವುದಕ್ಕೂ ಮುನ್ನ, ಸೆರೆ ಹಿಡಿಯಲು ಬಂದಿದ್ದ ಗಜಪಡೆಗಳ ಮುಂದೆಯೇ ಕಾಡಾನೆ(Wild Elephant) ರಾಜಗಾಂಭೀರ್ಯ ನಡಿಗೆ ನಡೆದು ಲುಕ್ ನೀಡಿದ್ದ ಘಟನೆ  ನಡೆದಿದೆ.

ಮೊನ್ನೆ ಶೃಂಗೇರಿಯಲ್ಲಿ ಇಬ್ಬರನ್ನ ಬಲಿ ಪಡೆದಿದ್ದ ಒಂಟಿ ಸಲಗವನ್ನು ಭಗವತಿ ಕಾಡಿನಲ್ಲಿ ಅರಣ್ಯ ಇಲಾಖೆ ಹಿಡಿದಿದೆ. ಕಾರ್ಯಾಚರಣೆಗೂ ಮುನ್ನ ಸಾಕಾನೆಗಳಿದ್ದ ಕ್ಯಾಂಪ್ ಕಡೆಗೆ ಬಂದಿದ್ದ ನರಹಂತಕ ಆನೆ ದುಬಾರೆಯಿಂದ ಬಂದಿದ್ದ ಸಾಕಾನೆಗಳ ಕ್ಯಾಂಪ್ ಮುಂದೆ ಆರಾಮಾಗಿ ಹೋಗಿತ್ತು. “ನನ್ನನ್ನು ಏನು ಮಾಡಲು ನಿಮ್ಮಿಂದ ಸಾಧ್ಯ” ಎಂಬಂತಿತ್ತು ಅದರ ನಡಿಗೆ.

ಸಾಕಾನೆಗಳಿದ್ದ ಕ್ಯಾಂಪ್ ಮುಂದೆ ಕಾಡಾನೆ ನಡೆಯುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಆದರೆ, ಕ್ಯಾಂಪ್ ಗೆ ಎಂಟ್ರಿ ಕೊಟ್ಟು ಕಾಡಾನೆ ತನಗೆ ತಾನೇ ಹಳ್ಳ ತೋಡಿಕೊಂಡಿದೆ. ಕ್ಯಾಂಪ್ ಗೆ ಎಂಟ್ರಿ ನೀಡಿ ಕೆಲವೇ ಕ್ಷಣಗಳಲ್ಲಿ ಪುಂಡಾನೆಗೆ ಅರವಳಿಕೆ ಹೊಡೆದು ಬೀಳಿಸಲಾಯಿತು. ನಂತರ ಸಾಕಾನೆಗಳು ಹಗ್ಗ ಹಾಕಿ ಪುಂಡಾನೆಯನ್ನು  ಕಟ್ಟಿ ಹಾಕಿದೆ.

ಸದ್ಯ ಪುಂಡಾನೆಯ ಸೆರೆಯಿಂದಾಗಿ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ