ಜೂನ್ 7ರಂದು ಲಾಕ್ ಡೌನ್ ಅಂತ್ಯ? | ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದೇನು? - Mahanayaka
12:31 AM Tuesday 14 - October 2025

ಜೂನ್ 7ರಂದು ಲಾಕ್ ಡೌನ್ ಅಂತ್ಯ? | ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದೇನು?

st somashekhar
29/05/2021

ಮೈಸೂರು: ಕೊರೊನಾ ನಿಯಂತ್ರಣಕ್ಕಾಗಿ  ಜೂನ್ 30ರವರೆಗೆ ಕಠಿಣ ಕ್ರಮಕೈಗೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಜೂನ್  7ರಂದು ಕೊನೆಗೊಳ್ಳಬೇಕಾಗಿರುವ ಲಾಕ್ ಡೌನ್ ಮತ್ತೆ ಮುಂದುವರಿಯುತ್ತದೆಯೇ ಎನ್ನುವ ಅನುಮಾನಗಳು ಮೂಡಿದ್ದವು.


Provided by

ಈ ವಿಚಾರಕ್ಕೆ ಸಂಬಂಧಿಸಿದಂತೆ  ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟನೆ ನೀಡಿದ್ದು, ಜೂನ್ 7ರ ಬಳಿಕ ಲಾಕ್ ಡೌನ್ ಮುಂದುವರಿಯುವುದಿಲ್ಲ. ಜೂನ್ 7ರಂದು ಲಾಕ್ ಡೌನ್ ಲಾಸ್ಟ್ ಎಂದು ಹೇಳಿರುವುದಾಗಿ ವರದಿಯಾಗಿದೆ.

ಲಾಕ್ ಡೌನ್ ನಿಂದಾಗಿ ದುಡಿಯುವ ವರ್ಗ ತೀವ್ರವಾಗಿ ತೊಂದರೆಗೀಡಾಗಿದೆ. ರಾಜ್ಯ ಸರ್ಕಾರವು ಅರ್ಚಕರಿಗೆ ಈಗಾಗಲೇ ಕಿಟ್ ಗಳನ್ನು ವಿತರಿಸುತ್ತಿದೆ. ಆದರೆ, ಕಠಿಣ ಕೆಲಸಗಳನ್ನು ಮಾಡುವ ಶ್ರಮಿಕ ವರ್ಗಕ್ಕೆ ಸರ್ಕಾರದ ನೆರವು ಇನ್ನೂ ದೊರೆತಿಲ್ಲ. ನಿಮ್ಮ ಯಾವುದೇ ಪ್ಯಾಕೇಜ್ ಇಲ್ಲದಿದ್ದರೂ ಪರವಾಗಿಲ್ಲ, ದುಡಿಯಲು ಅವಕಾಶ ಕೊಡಿ ಎಂದು ಈ ವರ್ಗ ಕೇಳುತ್ತಿದೆ. ಈ ನಡುವೆ ಮತ್ತೆ ಲಾಕ್ ಡೌನ್ ವಿಸ್ತರಿಸುತ್ತಾ ಹೋದರೆ ಈ ಜನರು ಇನ್ನಷ್ಟು ಸಂಕಷ್ಟಕ್ಕೀಡಾಗುವ ಸಾಧ್ಯತೆಗಳಿವೆ.

ಇತ್ತೀಚಿನ ಸುದ್ದಿ