ಮಹಾತ್ಮ ಜ್ಯೋತಿಬಾ ಫುಲೆ ಜನ್ಮ ದಿನಾಚರಣೆಗೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ - Mahanayaka
8:43 PM Thursday 7 - November 2024

ಮಹಾತ್ಮ ಜ್ಯೋತಿಬಾ ಫುಲೆ ಜನ್ಮ ದಿನಾಚರಣೆಗೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

Jyotiba Phule
11/04/2021

ನವದೆಹಲಿ: ಮಹಾತ್ಮ ಜ್ಯೋತಿಬಾ ಫುಲೆ ಅವರ ಜನ್ಮ ದಿನಾಚರಣೆಗೆ  ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದು, ಮುಂದಿನ ಪೀಳಿಗೆ ಸಮಾಜ ಸುಧಾರಣೆಯಲ್ಲಿ ತೊಡಗಲು ನೀವು ಸ್ಫೂರ್ತಿಯಾಗಿದ್ದೀರಿ ಎಂದು ಟ್ವೀಟ್  ಮಾಡಿದ್ದಾರೆ.

ಜ್ಯೋತಿಬಾ ಫುಲೆ ಅವರು  ತತ್ವಜ್ಞಾನಿಗಳು, ಉತ್ತಮ ಚಿಂತನಕಾರರು, ಲೇಖಕರು ಹಾಗೂ ಮಹಿಳಾ ಸುಧಾರಣೆ ತಮ್ಮ ಜೀವವನ್ನೆ ಮುಡಿಪಾಗಿಟ್ಟಿದ್ದರು. 1827ರಲ್ಲಿ ಮಹಾರಾಷ್ಟ್ರದಲ್ಲಿ ಹಿಂದುಳಿದ ಜಾತಿಯಲ್ಲಿ ಜನಿಸಿದ ಪುಲೆ ಅವರು ಸಮಾಜದಲ್ಲಿದ್ದ ತಾರತಮ್ಯ ನೀತಿ ವಿರುದ್ಧ ಸಿಡಿದೆದ್ದು ಕೆಳಮಟ್ಟದಲ್ಲಿ ಜೀವನ ಸಾಗಿಸುತ್ತಿದ್ದ ಜನಾಂಗದವರಿಗೆ ವಿದ್ಯಾರ್ಜನೆ ಬಗ್ಗೆ ಅರಿವು ಮೂಡಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಫುಲೆ ಹಾಗೂ ಅವರ ಪತ್ನಿ ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯರಿಗೆ ಶಿಕ್ಷಣ ದೊರಕಿಸಿಕೊಡುವಲ್ಲಿಯೂ ಮಹತ್ತರ ಪಾತ್ರ ನಿರ್ವಹಿಸಿದ್ದರು  ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ