ಕಾನೂನು ಸುವ್ಯವಸ್ಥೆ ಹತೋಟಿಗೆ ಬರಲಿ ಎಂದು ಚಾಮುಂಡಿಯನ್ನು ಬೇಡಿದ್ದೇನೆ ಎಂದ ಗೃಹ ಸಚಿವ ಅರಗ ಜ್ಞಾನೇಂದ್ರ! - Mahanayaka
5:28 PM Wednesday 10 - September 2025

ಕಾನೂನು ಸುವ್ಯವಸ್ಥೆ ಹತೋಟಿಗೆ ಬರಲಿ ಎಂದು ಚಾಮುಂಡಿಯನ್ನು ಬೇಡಿದ್ದೇನೆ ಎಂದ ಗೃಹ ಸಚಿವ ಅರಗ ಜ್ಞಾನೇಂದ್ರ!

araga jnanendra
27/08/2021

ಮೈಸೂರು: ರಾಜ್ಯದಲ್ಲಿ ಅಪರಾಧ ಪ್ರಕರಣಗಳು ನಡೆಯಬಾರದು. ಕಾನೂನು ಸುವ್ಯವಸ್ಥೆ ಹತೋಟಿಗೆ ಬರಬೇಕು. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ನನಗೆ ಮತ್ತು ಪೊಲೀಸ್ ಇಲಾಖೆಗೆ ಶಕ್ತಿ ಕೊಡು ಎಂದು ಚಾಮುಂಡೇಶ್ವರಿ ದೇವಿಯನ್ನು ಬೇಡಿಕೊಂಡಿದ್ದೇನೆಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.


Provided by

ಮೈಸೂರಿನಲ್ಲಿ  ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ  ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಜಿಲ್ಲೆಗೆ ಭೇಟಿ ನೀಡಿದ್ದು, ಈ ವೇಳೆ ಈ ಹೇಳಿಕೆ ನೀಡಿದ್ದು,  ರಾಜ್ಯದ ಜನತೆಗೆ ಒಳ್ಳೆಯದು ಮಾಡು ಎಂದು ದೇವಿಯನ್ನು ಬೇಡಿದ್ದೇನೆ ಎಂದು ಅವರು ಹೇಳಿದರು.

ಎಲ್ಲರಿಗೂ ಒಳ್ಳೆಯ ಮನಸ್ಸು ಕೊಡು ಎಂದು ಪ್ರಾರ್ಥಿಸಿದ್ದೇನೆ. ನಾನು ಗೃಹ ಸಚಿವನಾದ ಬಳಿಕ ಇದೇ ಮೊದಲ ಬಾರಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದಿದ್ದೇನೆ. ದರ್ಶನ ಮಾಡಿ ನನಗೆ ಬಹಳ ಸಂತೋಷವಾಯಿತು. ಕಾನೂನು ಸುವ್ಯವಸ್ಥೆ ಹತೋಟಿಗೆ ಬರುವಂತೆ ಪ್ರಾರ್ಥಿಸಿದ್ದೇನೆ ಎಂದು ಅವರು ಹೇಳಿದರು.

ಇನ್ನಷ್ಟು ಸುದ್ದಿಗಳು…

ಸುದ್ದಿ ಪ್ರಸಾರ ಮಾಡುವುದಾಗಿ ಬ್ಲ್ಯಾಕ್ ಮೇಲ್ | ವರದಿಗಾರ ಸೇರಿದಂತೆ 6 ಮಂದಿ ಅರೆಸ್ಟ್

ಪರಿಶಿಷ್ಟ ಜಾತಿಯ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ | ಆರೋಪಿ ಪಿಎಸ್ ಐ ಅರ್ಜುನ್ ಜಾಮೀನು ಅರ್ಜಿ ವಜಾ

ಗೃಹ ಸಚಿವರನ್ನು ರೇಪ್ ಮಾಡಿದ ಕಾಂಗ್ರೆಸ್ ನಾಯಕರ ಮೇಲೆ ಕೇಸ್ ಮಾಡಿ | ಡಿ.ಕೆ.ಶಿವಕುಮಾರ್ ಲೇವಡಿ

ನಿನ್ನ ಕಾಲ್ಗುಣ ಸರಿಯಿಲ್ಲ, ನೀನು ದರಿದ್ರ… ಪತಿಯ ನಿಂದನೆಯಿಂದ ಬೇಸತ್ತು ಪತ್ನಿ ಆತ್ಮಹತ್ಯೆ | ಡೆತ್ ನೋಟ್ ನಲ್ಲಿ ಭಾವನಾತ್ಮಕ ಸಂದೇಶ

ಪತ್ನಿಯನ್ನು ಕೊಂದು ಅಪಘಾತದ ಕಥೆ ಕಟ್ಟಿದ | ಕೊನೆಗೂ ಬಯಲಾಯ್ತು ಪತಿಯ ಹೇಯ ಕೃತ್ಯ

ಅತ್ಯಾಚಾರ ನಡೆದದ್ದು ಅಲ್ಲಿ, ಕಾಂಗ್ರೆಸ್ ನವರು ನನ್ನನ್ನು ರೇಪ್ ಮಾಡ್ತಿದ್ದಾರೆ | ಗೃಹ ಸಚಿವ ಅರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ

 

ಇತ್ತೀಚಿನ ಸುದ್ದಿ