ಕರ್ನಾಟಕ ಸಣ್ಣ ನೀರಾವರಿ & ಅಂತರ್ಜಲ ಅಭಿವೃದ್ಧಿ ಇಲಾಖೆಯಲ್ಲಿ ಬೃಹತ್ ನೇಮಕಾತಿಗೆ ಅಧಿಸೂಚನೆ

Karnatak Minor Irrigation Ground Water Development Department Recruitment 2025 – ಕರ್ನಾಟಕ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಲ್ಲಿ ಒಟ್ಟು ಖಾಲಿ 1,805 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ.
ಇದರಲ್ಲಿ ವಿವಿಧ ಹುದ್ದೆಗಳ ನೇರ ನೇಮಕಾತಿ ಮತ್ತು ಮುಂಬಡ್ತಿ ಮುಕಾಂತರ ನೇಮಕಾತಿ ಪ್ರಕ್ರಿಯೆಗೆ ಸಂಬಂದಿಸಿದ ಹುದ್ದೆಗಳ ವಿವರ, ವಯೋಮಿತಿಯ ವಿವರ ಹಾಗೂ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರಕಟಣೆಯನ್ನು ಪ್ರಕಟಿಸಲಾಗಿದೆ.
ಯಾವೆಲ್ಲಾ ಹುದ್ದೆಗಳು ಸಣ್ಣ ನೀರಾವರಿ & ಅಂತರ್ಜಲ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇವೆ?
ಕರ್ನಾಟಕ ಸಣ್ಣ ನೀರಾವರಿ ಇಲಾಖೆಯಲ್ಲಿ ಒಟ್ಟು 1,805 ಹುದ್ದೆಗಳ ಬೃಹತ್ ನೇಮಕಾತಿಗೆ ಶೀಘ್ರದಲ್ಲಿಯೆ ಅಧಿಸೂಚನೆ ಹೊರಬೀಳಲಿದೆ. ಈ ನೇಮಕಾತಿಯಲ್ಲಿ SSLC ಯಿಂದ ಪದವಿ ಮುಗಿಸಿದ ಅಭ್ಯರ್ಥಿಗಳಿಗೂ ಉದ್ಯೋಗವಕಾಶ ದೊರೆಯಲಿದೆ.
ಇದರಲ್ಲಿ ಯಾವ ಹುದ್ದೆಗಳನ್ನು ನೇಮಕಾತಿ ಮಾಡಿಕೊಡಲಾಗುತ್ತೆ ಎಂದು ನೋಡುವುದಾದರೆ AEE, AE, JE, SDA, SDAA, FDA, FDAA, Stenographer, Driver, Cook, Peon & Watchman ಹುದ್ದೆಗಳು ಸೇರಿದಂತೆ ವಿವಿಧ ಸಾವಿರಾರು ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು.
ಸದ್ಯಕ್ಕೆ ಈ ನೇಮಕಾತಿಗೆ ಸಂಬಂಧಿಸಿದಂತೆ ಕರಡು ನಿಯಮಗಳನ್ನು ಒಳಗೊಂಡಿರುವ ರಾಜ್ಯಪತ್ರವನ್ನು 09 ಜನವರಿ 2025 ರಂದು ಪ್ರಕಟ ಮಾಡಲಾಗಿದೆ. ಇದರಲ್ಲಿ ಹುದ್ದೆಗಳ ನೇಮಕಾತಿ ವಿಧಾನ, ಶೈಕ್ಷಣಿಕ ಅರ್ಹತೆಗಳು, ಆಯ್ಕೆ ಪರೀಕ್ಷಾ ವಿಧಾನ ಸೇರಿದಂತೆ ಹಲವು ವಿಷಯಗಳನ್ನು ತಿಳಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: