ಕೆಇಬಿ ನೌಕರನ ಗುಂಡಿಟ್ಟು ಭೀಕರ ಹತ್ಯೆ | ಘಟನಾ ಸ್ಥಳದಲ್ಲೇ ಹಂತಕರಿಂದ ಪಾರ್ಟಿ!? - Mahanayaka
1:36 AM Wednesday 17 - September 2025

ಕೆಇಬಿ ನೌಕರನ ಗುಂಡಿಟ್ಟು ಭೀಕರ ಹತ್ಯೆ | ಘಟನಾ ಸ್ಥಳದಲ್ಲೇ ಹಂತಕರಿಂದ ಪಾರ್ಟಿ!?

16/01/2021

ಹಾಸನ: ಕೆಇಬಿ ನೌಕರರೋರ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆತಂಕಕಾರಿ ಘಟನೆ ಹಾಸನದ ಹೂವಿನಹಳ್ಳಿ ಕಾವಲು ಬಳಿ ನಡೆದಿದ್ದು,  ಇಲ್ಲಿನ ಜಮೀನೊಂದರಲ್ಲಿ ಕೆಇಬಿ ನೌಕರನ ದೇಹ ಪತ್ತೆಯಾಗಿದೆ.


Provided by

ಸಂತೋಷ್(36) ಮೃತ ಕೆಇಬಿ ನೌಕರರಾಗಿದ್ದು,  ಮೃತದೇಹ ಪತ್ತೆಯಾದ ಸ್ಥಳದಲ್ಲಿ ಮದ್ಯದ ಬಾಟಲಿ, ಊಟದ ಪ್ಯಾಕೆಟ್ ಗಳು ಪತ್ತೆಯಾಗಿದೆ. ಕೊಲೆಗೂ ಮೊದಲು ಹಂತಕರು ಈ ಪ್ರದೇಶದಲ್ಲಿ ಪಾರ್ಟಿ ಮಾಡಿದ್ದಾರೆ. ಅಥವಾ ಸಂತೋಷ್ ಜೊತೆಗೆ ಹಂತಕರು ಪಾರ್ಟಿ ನಡೆಸಿ ಆ ಬಳಿಕ ಕೊಲೆ ನಡೆದಿದೆ ಎಂಬ ಅನುಮಾನಗಳಿಗೆ ಸದ್ಯ ಇದು ಕಾರಣವಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.  ಸಂತೋಷ್ ಹತ್ಯೆಗೆ ನಿಖರ ಕಾರಣಗಳು ಇನ್ನೂ ತಿಳಿದು ವಂದಿಲ್ಲ. ಹಾಸನ ಗ್ರಾಮಾಂತರ ಠಾಣಾ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇತ್ತೀಚಿನ ಸುದ್ದಿ