ದೇವೇಗೌಡರಿಲ್ಲದೇ ಕೆಂಪೇಗೌಡರ ಪ್ರತಿಮೆ ಅನಾವರಣ, ದೇವರೇ ಇಲ್ಲದ ಜಾತ್ರೆಯಂತೆ: ಜೆಡಿಎಸ್ ಮುಖಂಡ ಪ್ರವೀಣ್ ಗೌಡ ಬೇಸರ - Mahanayaka
8:09 PM Thursday 12 - December 2024

ದೇವೇಗೌಡರಿಲ್ಲದೇ ಕೆಂಪೇಗೌಡರ ಪ್ರತಿಮೆ ಅನಾವರಣ, ದೇವರೇ ಇಲ್ಲದ ಜಾತ್ರೆಯಂತೆ: ಜೆಡಿಎಸ್ ಮುಖಂಡ ಪ್ರವೀಣ್ ಗೌಡ ಬೇಸರ

praveen gowda
11/11/2022

ಹಾಸನ: ದೇವೇಗೌಡರಿಲ್ಲದೇ ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಮಾಡೋದು ಒಂದೇ, ದೇವರೇ ಇಲ್ಲದೆ ಜಾತ್ರೆಯ ಮೆರವಣಿಗೆ ಮಾಡೋದು ಒಂದೇ ಎಂದು ಜೆಡಿಎಸ್ ಮುಖಂಡ ಪ್ರವೀಣ್ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ವಿಶ್ವದ ಅತಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡುತ್ತಿದ್ದಾರೆ. ಇದು ಸಂತಸದ ವಿಚಾರವಾಗಿದೆ. ಆದರೆ ಬಿಜೆಪಿಯು ಪ್ರತಿಮೆ ಅನಾವರಣದ ಸಂದರ್ಭದಲ್ಲಿ ವೇದಿಕೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಕಾಣದೆ ಒಕ್ಕಲಿಗ ಸಮಾಜ ಬೇಸರ ವ್ಯಕ್ತಪಡಿಸಿದೆ ಎಂದು ಜೆಡಿಎಸ್ ಮುಖಂಡ ಪ್ರವೀಣ್ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಹಿರಿಯ ನಾಯಕರಾದ ದೇವೇಗೌಡರಿಂದಲೇ ಕೆಂಪೇಗೌಡರ ಪ್ರತಿಮೆಯನ್ನು ಅನಾವರಣಗೊಳಿಸಬಹುದಿತ್ತು. ಅವರ ಈ ಹಿರಿತನದ ಸಂದರ್ಭದಲ್ಲಿ ಅವರಿಗೆ ಈ ಮೂಲಕವಾಗಿ ಗೌರವ ನೀಡಬಹುದಿತ್ತು. ಆದರೆ, ಸದ್ಯ ಸಾರ್ವಜನಿಕವಾಗಿ ಚರ್ಚೆಯಲ್ಲಿರುವಂತೆ ಬಿಜೆಪಿಯು ರಾಜಕೀಯ ಲೆಕ್ಕಚಾರಗಳನ್ನಿಟ್ಟುಕೊಂಡು ಕೆಂಪೇಗೌಡರ ಪ್ರತಿಮೆ ಅನಾವರಣದಲ್ಲಿ ದೇವೇಗೌಡರಿಗೆ ಪ್ರಾಮುಖ್ಯತೆ ನೀಡಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರವೀಣ್ ತಿಳಿಸಿದರು.

ದಸರಾ ಉದ್ಘಾಟನೆಯ ವೇಳೆ ಕೂಡ ದೇವೇಗೌಡರಿಂದ ದಸರಾ ಉದ್ಘಾಟಿಸಿ ಎಂಬ ಒತ್ತಾಯಗಳು ಕೇಳಿ ಬಂದಿದ್ದವು. ಆದರೆ ಅಂತಹ ಸಂದರ್ಭದಲ್ಲೂ ದೇವೇಗೌಡರನ್ನು ಕಡೆಗಣಿಸಲಾಯಿತು. ಇದೀಗ ಕೆಂಪೇಗೌಡರ ಪ್ರತಿಮೆಯನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಅವರನ್ನು ಕರೆಸಿರುವ ಬಿಜೆಪಿ ರಾಜ್ಯದವರೇ ಆದ, ಮಾಜಿ ಪ್ರಧಾನಿ ದೇವೇಗೌಡರನ್ನು ಕಡೆಗಣಿಸಿದ್ದಾರೆ. ದೇವೇಗೌಡರಿಂದಲೇ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಿಸಬಹುದಿತ್ತು. ಈ ಮೂಲಕ ಅವರ ಹಿರಿತನದ ಸಂದರ್ಭದಲ್ಲಿ ಅವರಿಗೆ ಗೌರವ ನೀಡಬಹುದಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಮೆ ಅನಾವರಣ ಒಂದು ಸರ್ಕಾರಿ ಕಾರ್ಯಕ್ರಮವಾಗಿ ಎಲ್ಲರಿಗೂ ಪ್ರಾಮುಖ್ಯತೆ ನೀಡಬೇಕಿತ್ತು. ಈ ನಾಡಿಗೆ ಅಪಾರವಾದ ಕೊಡುಗೆ ನೀಡಿರುವ ದೇವೇಗೌಡರಿಗೆ ಪ್ರಾಮುಖ್ಯತೆ ನೀಡಬೇಕಿತ್ತು. ರಾಜ್ಯದಲ್ಲೇ ಕೆಂಪೇಗೌಡರ ಪರವಾಗಿ ಕೆಲಸ ಮಾಡುತ್ತಿರುವ ಸಾವಿರಾರು ಒಕ್ಕಲಿಗ ನಾಯಕರು, ಕನ್ನಡಪರ ಸಂಘಟನೆಗಳಿಗೂ ಪ್ರಾಮುಖ್ಯತೆ ನೀಡಬೇಕಿತ್ತು. ಆದರೆ ಅವರನ್ನು ನಿರ್ಲಕ್ಷಿಸಲಾಗಿದೆ ಎಂದು ಪ್ರವೀಣ್ ಬೇಸರ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ