ವಯನಾಡು ದುರಂತ: ಸಂತ್ರಸ್ತರ ಸಾಲವನ್ನು ಮನ್ನಾ ಮಾಡಿದ ಕೇರಳ ಬ್ಯಾಂಕ್
12/08/2024
ಕೇರಳ ರಾಜ್ಯದ ವಯನಾಡು ದುರಂತದಲ್ಲಿ ಸಾವಿಗೀಡಾದವರು ಮತ್ತು ಮನೆ, ಆಸ್ತಿಪಾಸ್ತಿಗಳನ್ನು ಕಳಕೊಂಡವರ ಎಲ್ಲ ಸಾಲವನ್ನು ಕೇರಳ ಬ್ಯಾಂಕ್ ಮನ್ನಾ ಮಾಡಿದೆ. ಈ ನಿರ್ಧಾರವನ್ನು ಚೂರಲ್ಮಲ ಶಾಖೆ ಕೈಗೊಂಡಿದೆ. ಮನೆಗಾಗಿ ಸಾಲ ಪಡೆದವರು, ಮನೆಯನ್ನು ಅಡವಿಟ್ಟು ಸಾಲ ಪಡೆದವರು ಮತ್ತು ಮನೆ ಸಹಿತ ಆಸ್ತಿಪಾಸ್ತಿಗಳನ್ನೆಲ್ಲ ಕಳಕೊಂಡವರ ಸಾಲವನ್ನು ಕೇರಳ ಬ್ಯಾಂಕ್ ಮನ್ನಾ ಮಾಡಿರುವುದು ವಿಶೇಷವಾಗಿದೆ.
ವಯನಾಡು ದುರಂತಕ್ಕೆ ಸಂಬಂಧಿಸಿ ಬ್ಯಾಂಕ್ ಈಗಾಗಲೇ 50 ಲಕ್ಷ ರೂಪಾಯಿಯನ್ನು ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ನೀಡಿದೆ. ಅಲ್ಲದೆ ಕೇರಳ ಬ್ಯಾಂಕಿನ ಉದ್ಯೋಗಿಗಳು 5 ದಿವಸದ ತಮ್ಮ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth