ವಿದ್ಯಾರ್ಥಿಗಳ ಮೇಲೆ ಕಾರು ಹರಿಸಲು ಯತ್ನ: ಕೇರಳ ಯೂಟ್ಯೂಬರ್ ಬಂಧನ

ಕಾಲೇಜು ವಿದ್ಯಾರ್ಥಿಗಳ ಮೇಲೆ ಕಾರು ಹರಿಸಲು ಪ್ರಯತ್ನಿಸಿದ ಆರೋಪದ ಮೇಲೆ ಕೇರಳದ ತ್ರಿಶೂರ್ ನ ಜನಪ್ರಿಯ ಯೂಟ್ಯೂಬರ್ ಅನ್ನು ತ್ರಿಶೂರ್ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 14 ದಿನಗಳ ಕಸ್ಟಡಿಗೆ ಒಪ್ಪಿಸಿದೆ.
ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ನ ಯೂಟ್ಯೂಬ್‌ನಲ್ಲಿ ‘ಮನವಾಲನ್’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ತ್ರಿಶೂರ್ ನ ಎರನೆಲ್ಲೂರ್ ನಿವಾಸಿ 26 ವರ್ಷದ ಮುಹಮ್ಮದ್ ಶಾಹೀನ್ ಶಾ ಏಪ್ರಿಲ್ 19, 2024 ರಂದು ನಡೆದ ಘಟನೆಯ ನಂತರ ಪರಾರಿಯಾಗಿದ್ದ. ತ್ರಿಶೂರ್ ಸಿಟಿ ಶಾಡೋ ಪೊಲೀಸರು ಮಂಗಳವಾರ (ಜನವರಿ 21) ಕೊಡಗಿನಲ್ಲಿ ಅಡಗಿಕೊಂಡಿದ್ದ ಆತನನ್ನು ಬಂಧಿಸಿದ್ದಾರೆ.
ಬಂಧನದ ನಂತರ ಮ್ಯಾಜಿಸ್ಟ್ರೇಟ್ ಬಳಿಗೆ ಕರೆದೊಯ್ಯುವಾಗ ಆತ ಸುತ್ತ ಇದ್ದವರತ್ತ ಕೈ ಬೀಸಿದ್ದಾನೆ.
ತ್ರಿಶೂರ್ ಪೂರಂ ಆಚರಣೆಯ ಸಂದರ್ಭದಲ್ಲಿ ಶಾಹೀನ್ ಶಾ ಮತ್ತು ವಿದ್ಯಾರ್ಥಿಗಳ ನಡುವಿನ ವಿವಾದದ ನಂತರ ಕೇರಳ ವರ್ಮಾ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಕಾರು ಹರಿಸಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj