ಉಪ್ಪಿಟ್ಟು ಬೇಡ, ಬಿರಿಯಾನಿ ಮತ್ತು ಚಿಕನ್ ಫ್ರೈ ನೀಡಿ ಎಂದ ಕೇರಳಿ ಮಗು: ತಕ್ಷಣದಲ್ಲೇ ಮೆನುವಿನಲ್ಲಿ ಬದಲಾವಣೆ! - Mahanayaka

ಉಪ್ಪಿಟ್ಟು ಬೇಡ, ಬಿರಿಯಾನಿ ಮತ್ತು ಚಿಕನ್ ಫ್ರೈ ನೀಡಿ ಎಂದ ಕೇರಳಿ ಮಗು: ತಕ್ಷಣದಲ್ಲೇ ಮೆನುವಿನಲ್ಲಿ ಬದಲಾವಣೆ!

04/02/2025


Provided by

ಅಂಗನವಾಡಿಯಲ್ಲಿ ಉಪ್ಪಿಟ್ಟಿನ ಬದಲಿಗೆ ಬಿರಿಯಾನಿ ಮತ್ತು ಚಿಕನ್ ಫ್ರೈ ನೀಡುವಂತೆ ಮಗುವೊಂದು ಮನವಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೇರಳದ ಮಕ್ಕಳ ಆರೈಕೆ ಕೇಂದ್ರಗಳಲ್ಲಿ ಸರಕಾರವು ಮೆನುವಿನಲ್ಲಿ ಬದಲಾವಣೆ ಮಾಡುವುದಾಗಿ ಕೇರಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ವೈರಲ್ ಆಗಿರುವ ವೀಡಿಯೊದಲ್ಲಿ, “ನನಗೆ ಉಪ್ಮಾ ಬದಲಿಗೆ ಅಂಗನವಾಡಿಯಲ್ಲಿ ಬಿರಿಯಾನಿ ಮತ್ತು ಪೊರಿಚ ಕೋಳಿ’ ಚಿಕನ್ ಫ್ರೈ ಬೇಕು” ಎಂದು ಮಗು ತನ್ನ ತಾಯಿಯನ್ನ ಮುಗ್ಧವಾಗಿ ಕೇಳುತ್ತಿದೆ. ಮನೆಯಲ್ಲಿ ಬಿರಿಯಾನಿ ತಿನ್ನುವಾಗ ಮಗು ವಿನಂತಿಸಿದಾಗ ವೀಡಿಯೊವನ್ನು ಚಿತ್ರೀಕರಿಸಿದ ತಾಯಿ, ಬಳಿಕ ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋವನ್ನು ಕೇರಳ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅಂಗನವಾಡಿಯ ಮೆನುವನ್ನು ಪರಿಷ್ಕರಿಸಲಾಗುವುದು. ಮಗು ಮುಗ್ಧವಾಗಿ ವಿನಂತಿಸಿದೆ. ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಶಂಕು, ಅವರ ತಾಯಿ ಮತ್ತು ಅಂಗನವಾಡಿ ಸಿಬ್ಬಂದಿಗೆ ಶುಭಾಶಯ ತಿಳಿಸಿದ ಸಚಿವೆ ವೀಣಾ ಜಾರ್ಜ್, ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಖಚಿತಪಡಿಸಿಕೊಳ್ಳಲು ಅಂಗನವಾಡಿಗಳ ಮೂಲಕ ವಿವಿಧ ರೀತಿಯ ಆಹಾರವನ್ನು ಒದಗಿಸಲಾಗುತ್ತದೆ. ಶಂಕುವಿನ ಸಲಹೆಯನ್ನು ಗಣನೆಗೆ ತೆಗೆದುಕೊಂಡು ಮೆನುವನ್ನು ಪರಿಶೀಲಿಸಲಾಗುವುದು ಎಂದಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ