ಕೆಜಿಎಫ್ ನ ರಿಯಲ್ ಸ್ಟೋರಿ ‘ತಂಗಳನ್’ ಭರ್ಜರಿ ಹಿಟ್: ಕೆಜಿಎಫ್ ನಲ್ಲಿ ನಿಜವಾಗಿಯೂ ಯಾಕೆ ಹೋರಾಟ ನಡೆಯಿತು?
ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ತಮಿಳಿನ ಖ್ಯಾತ ನಟ ಚಿಯಾನ್ ವಿಕ್ರಮ್ ನಟನೆಯ ತಂಗಳನ್ (Thangalaan) ಚಿತ್ರ ಭರ್ಜರಿಯಾಗಿ ಸೌಂಡ್ ಮಾಡ್ತಿದೆ.
ಯಶ್ ನಟನೆಯ ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ಚಿತ್ರಗಳನ್ನು ನೀವು ನೋಡಿದ್ದೀರಿ. ಆದ್ರೆ ಇದು ಕೇವಲ ಕಾಲ್ಪನಿಕ ಕಥೆಯಾಗಿದೆ. ಆದ್ರೆ ಕೆಜಿಎಫ್ ನಲ್ಲಿ ನಿಜವಾಗಿಯೂ ಏನು ನಡೆದಿತ್ತು. ಅನ್ನೋ ರಿಯಲ್ ಸ್ಟೋರಿ ‘ತಂಗಳನ್’ ಚಿತ್ರದಲ್ಲಿದ್ದು, ಇದು ನೈಜ ಘಟನೆಯನ್ನಾಧರಿಸಿದ ರೋಮಾಂಚನಕಾರಿ ಕಥೆಯನ್ನೊಳಗೊಂಡ ಚಿತ್ರವಾಗಿದೆ.
ತಳ ಸಮುದಾಯಗಳ ಮುಚ್ಚಿ ಹೋಗುತ್ತಿರುವ ಕಥೆಗಳನ್ನು ಸಿನಿಮಾವಾಗಿ ತೋರಿಸುವ ಪಾ.ರಂಜಿತ್ ಅವರು ಈ ಬಾರಿಯೂ ಸಿನಿಪ್ರಿಯರ ನಂಬಿಕೆಯನ್ನು ಉಳಿಸಿದ್ದಾರೆ. ಚಿಯಾನ್ ವಿಕ್ರಮ್ ನಟನೆಯ ಬಗ್ಗೆಯಂತೂ ಹೇಳಬೇಕೆಂದಿಲ್ಲ. ಅಷ್ಟೊಂದು ಪ್ರಬುದ್ಧ ನಟನೆ ಅವರದ್ದು. ಆರಂಭದಲ್ಲೇ ಪಾ.ರಂಜಿತ್ ಹಾಗೂ ಚಿಯಾನ್ ವಿಕ್ರಮ್ ಕೈಜೋಡಿಸಿರುವ ಚಿತ್ರ ಅಂತ ಹೇಳುವಾಗಲೇ ಸಾಕಷ್ಟು ಜನರು ಈ ಚಿತ್ರ ಸೂಪರ್ ಹಿಟ್ ಅಂತ ಹೇಳಿದ್ರು… ಇದೀಗ ತಂಗಳನ್ ಚಿತ್ರ ಸೂಪರ್ ಹಿಟ್ ಆಗಿ ಮುನ್ನುಗ್ಗುತ್ತಿದೆ.
1850 ರಲ್ಲಿ ಬ್ರಿಟಿಷರ ಕಾಲದಲ್ಲಿ ನಡೆದ ಕಥೆಯನ್ನು ಈ ಚಿತ್ರ ಹೊಂದಿದೆ. ಕೆಜಿಎಫ್ ಚಿತ್ರದಲ್ಲಿ ಚಿನ್ನಕ್ಕಾಗಿ ಹೋರಾಡುವ ಸಂದರ್ಭ ಸೃಷ್ಟಿಸಿ ಕಾಲ್ಪನಿಕ ಕಥೆ ಮಾಡಲಾಗಿತ್ತು. ಆದರೆ ಇದೀಗ ತಂಗಳನ್ ಚಿತ್ರದಲ್ಲಿ ಭೂಮಿಗಾಗಿ ಹೋರಾಟ ಸೇರಿದಂತೆ ಹಲವು ನಿಜವಾದ ಕಥೆಗಳನ್ನು ನೀಡಲಾಗಿದೆ.
ತಂಗಳನ್(ವಿಕ್ರಮ್) ನಿಜವಾದ ಹೀರೋ, ದಬ್ಬಾಳಿಕೆಗಳಿಂದ ತನ್ನನ್ನು ಹಾಗೂ ತನ್ನವರನ್ನು ರಕ್ಷಿಸಲು ಆತ ಚಿನ್ನದ ಬೇಟೆಗೆ ಇಳಿಯುತ್ತಾನೆ. ಆ ಚಿನ್ನದ ಬೇಟೆ ಹೇಗಿರುತ್ತದೆ ಎನ್ನುವುದೇ ಈ ಚಿತ್ರದ ಕಥೆ. ಈ ಚಿತ್ರವನ್ನು ನೋಡಿದ್ರೆ, ಕೆಜಿಎಫ್ ಚಿತ್ರ ಏನೇನೂ ಅಲ್ಲ ಅಂತೀರಿ ಅನ್ನೋದು, ಚಿತ್ರವನ್ನು ವೀಕ್ಷಿಸಿದವರು ಹೇಳುತ್ತಿರುವ ಮಾತಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: