ಖಲಿಸ್ತಾನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವೀಡಿಯೋ: ಖಲಿಸ್ತಾನಿಗಳಿಂದ ಸಿಖ್ ರೆಸ್ಟೋರೆಂಟ್ ಮೇಲೆ ದಾಳಿ, ಬೆದರಿಕೆ - Mahanayaka
12:16 AM Saturday 13 - December 2025

ಖಲಿಸ್ತಾನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವೀಡಿಯೋ: ಖಲಿಸ್ತಾನಿಗಳಿಂದ ಸಿಖ್ ರೆಸ್ಟೋರೆಂಟ್ ಮೇಲೆ ದಾಳಿ, ಬೆದರಿಕೆ

01/10/2023

ಜಸ್ಟಿನ್ ಟ್ರುಡೊ ತಮ್ಮ ಮತ ಬ್ಯಾಂಕ್‌ಗಾಗಿ ಅಪರಾಧಿಗಳಿಗೆ ಆಶ್ರಯ ನೀಡುತ್ತಿದ್ದಾರೆ. ಅವರು ರಕ್ಷಿಸುತ್ತಿರುವ ಈ ಖಲಿಸ್ತಾನಿಗಳು ಒಂದು ದಿನ ಕೆನಡಾದಲ್ಲಿ ಗಲಭೆಗಳನ್ನು ನಡೆಸುತ್ತಾರೆ ಎಂದು ಖಲಿಸ್ತಾನ್ ಚಳವಳಿಯ ಬಗ್ಗೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ತಾನು ಬೆದರಿಕೆ ಎದುರಿಸುತ್ತಿದ್ದೇನೆ ಎಂದು ಲಂಡನ್ ನ ಸಿಖ್ ರೆಸ್ಟೋರೆಂಟ್ ಮಾಲೀಕ ಹರ್ಮನ್ ಸಿಂಗ್ ಕಪೂರ್ ಟೈಮ್ಸ್ ನೌಗೆ ತಿಳಿಸಿದ್ದಾರೆ.

ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನ್ ಅನ್ನು ಧ್ವಂಸಗೊಳಿಸಿದ ಕೆಲವೇ ದಿನಗಳಲ್ಲಿ ಹರ್ಮನ್ ಅವರ ರೆಸ್ಟೋರೆಂಟ್ ಮೇಲೆ ಖಲಿಸ್ತಾನ್ ಪರ ತೀವ್ರಗಾಮಿಗಳು ದಾಳಿ ನಡೆಸಿದ್ದರು. “ಪುರಾವೆಗಳಿಲ್ಲದೆ ಇತರ ದೇಶದ ಮೇಲೆ ಆರೋಪ ಮಾಡಿದ ವಿಶ್ವದ ಮೊದಲ ಪ್ರಧಾನಿ ಟ್ರುಡೊ” ಎಂದು ಹರ್ಮನ್ ಹೇಳಿದರು. ಹರ್ಮನ್ ಮತ್ತು ಅವರ ಪತ್ನಿ ಖುಷಿ ಮತ್ತು ಇಬ್ಬರು ಮಕ್ಕಳ ಮೇಲೆ ಮೂರು ಬಾರಿ ಹಲ್ಲೆ ನಡೆಸಿದ್ದಾರೆ. ಇವರನ್ನು ಸಾಮಾಜಿಕ ಮಾಧ್ಯಮದಲ್ಲಿ ಪದೇ ಪದೇ ಟ್ರೋಲ್ ಮಾಡಲಾಗಿದೆ. ನಿಂದನಾತ್ಮಕ ಕರೆ ಮಾಡಿ ಬೆದರಿಸಲಾಗಿದೆ ಎಂದು ಆರೋಪಿಸಲಾಗಿದೆ. ದಂಪತಿಗಳ ಕಾರನ್ನು ಸಹ ಧ್ವಂಸಗೊಳಿಸಲಾಗಿದೆ.

ಈ ಖಲಿಸ್ತಾನಿಗಳಿಗೆ ಒಂದೇ ಒಂದು ವಿಷಯ ತಿಳಿದಿದೆ. ಅದು ಹಿಂಸಾಚಾರ. ಅವರು ಭಾರತದಲ್ಲಿದ್ದಾಗ ಮಾಡಿದಂತೆಯೇ ಕೆನಡಾ, ಯುಕೆಯಲ್ಲಿ ಅದೇ ಅಪರಾಧ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಅವರಿಗೆ ಯಾವುದೇ ನಿಷ್ಠೆ ಇಲ್ಲ” ಎಂದು ಹರ್ಮನ್ ಸಿಂಗ್ ಕಪೂರ್ ಬೇಸರ ವ್ಯಕ್ತಪಡಿಸಿದ್ದರು.

ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನ್ ಅನ್ನು ಧ್ವಂಸಗೊಳಿಸಿದ ಕೆಲವೇ ದಿನಗಳಲ್ಲಿ ಹರ್ಮನ್ ಅವರ ರೆಸ್ಟೋರೆಂಟ್ ಮೇಲೆ ಖಲಿಸ್ತಾನ್ ಪರ ತೀವ್ರಗಾಮಿಗಳು ದಾಳಿ ನಡೆಸಿದ್ದರು.

ಇತ್ತೀಚಿನ ಸುದ್ದಿ