ಲಸಿಕಾ ಅಭಿಯಾನದ ವೇಳೆ ಆರೋಗ್ಯ ಸಿಬ್ಬಂದಿಯ ಮೇಲೆ ಮಹಿಳೆಯಿಂದ ಹಲ್ಲೆ! - Mahanayaka

ಲಸಿಕಾ ಅಭಿಯಾನದ ವೇಳೆ ಆರೋಗ್ಯ ಸಿಬ್ಬಂದಿಯ ಮೇಲೆ ಮಹಿಳೆಯಿಂದ ಹಲ್ಲೆ!

lasika abhiyana
18/09/2021

ಹುಬ್ಬಳ್ಳಿ:  ಲಸಿಕಾ ಅಭಿಯಾನದ ವೇಳೆ ಆರೋಗ್ಯ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿ ಹಲ್ಲೆ ನಡೆಸಿರುವ ಘಟನೆ ಹಳೆ ಹುಬ್ಬಳ್ಳಿ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ಹಮ್ಮಿಕೊಂಡಿದ್ದ ಲಸಿಕಾ ಕಾರ್ಯಕ್ರಮದಲ್ಲಿ ನಡೆದಿದ್ದು, ಘಟನೆ ಸಂಬಂಧ ಕಸಬಾ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Provided by

ಜಿಲ್ಲೆಯಾದ್ಯಂತ ಬೃಹತ್ ಲಸಿಕಾ ಅಭಿಯಾನ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಎಎನ್‌ ಎಂಐ ನರ್ಸ್‌ ನಂದಿನಿ ಚುಂಚಾ ಜೊತೆ ಅಂಬಿಕಾ ಜರತಾರಘರ ಎಂಬುವರು ಕೋವಿಡ್‌ ಲಸಿಕೆ ಪಡೆದ ನಂತರ ಮೊಬೈಲ್‌ ಗೆ ಸಂದೇಶ ಬಾರದಿರುವ ಕುರಿತು ಜಗಳ ತೆಗೆದಿದ್ದಾರೆ.

ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ವಿಕೋಪಕ್ಕೆ ತಿರುಗಿದ್ದು, ಮಹಿಳೆ ನರ್ಸ್ ಗೆ ಮೊಬೈಲ್ ಫೋನ್ ನಿಂದ ಮುಖಕ್ಕೆ ಹಲ್ಲೆ ನಡೆಸಿದ್ದು, ಪರಿಣಾಮವಾಗಿ ನರ್ಸ್ ನ ಮುಖಕ್ಕೆ ಗಾಯವಾಗಿದೆ. ಸ್ಥಳಕ್ಕೆ ಕಸಬಾಪೇಟೆ ಠಾಣೆ ಇನ್ಸ್‌ಪೆಕ್ಟರ್‌ ರತನಕುಮಾರ ಜಿರಗ್ಯಾಳ ಹಾಗೂ ಸಿಬ್ಬಂದಿ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ, ಮಹಿಳೆಯನ್ನು ಠಾಣೆಗೆ ಕರೆದೊಯ್ದು ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ಇನ್ನಷ್ಟು ಸುದ್ದಿಗಳು…

ನಟ ದರ್ಶನ್ ಫಾರಂ ಹೌಸ್ ನಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ!

ಪ್ರಧಾನಿ ಮೋದಿಗೆ ಪರ್ಯಾಯ ರಾಹುಲ್ ಅಲ್ಲ, ಮಮತಾ ಬ್ಯಾನರ್ಜಿ | ಜಾಗೋ ಬಾಂಗ್ಲಾ ವರದಿ

ಮಕ್ಕಳಲ್ಲಿ ಹೆಚ್ಚುತ್ತಿದೆ ವೈರಲ್ ಜ್ವರ: ಪೋಷಕರಲ್ಲಿ ಆತಂಕ

ಸಿಲಿಕಾನ್ ಸಿಟಿ ಫ್ಲೈಓವರ್ ನಲ್ಲಿ ಆಕ್ಸಿಡೆಂಡ್ ಆದ ಜಾಗದಲ್ಲಿಯೇ ಕಾರು ನಿಲ್ಲಿಸಿ ಯುವಕ, ಯುವತಿಯರ ಡಾನ್ಸ್!

ಮೋದಿಜಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಿದವರಿಗಿಂತ ಉದ್ಯೋಗ ಕೇಳಿದವರ ಸಂಖ್ಯೆಯೇ ಹೆಚ್ಚು!

ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಮುತ್ತಿಟ್ಟವನಿಗಾಗಿ ಶೋಧ ನಡೆಸುತ್ತಿರುವ ಪೊಲೀಸರು!

ಅತ್ಯಾಚಾರ ಯತ್ನ ವಿಫಲವಾದಾಗ ವೃದ್ಧೆಯನ್ನು ಕೊಂದು ಮೃತದೇಹದ ಮೇಲೆಯೇ ಹೇಯ ಕೃತ್ಯ

ಇತ್ತೀಚಿನ ಸುದ್ದಿ