ಲಸಿಕೆ ಹಾಕಲು ಬಂದಾಗ ಅಜ್ಜಿಯ ಮೈಮೇಲೆ ಬಂದ ದೇವರು | ತಹಶೀಲ್ದಾರ್ ಮಾಡಿದ ಉಪಾಯ ಏನು ಗೊತ್ತಾ? - Mahanayaka

ಲಸಿಕೆ ಹಾಕಲು ಬಂದಾಗ ಅಜ್ಜಿಯ ಮೈಮೇಲೆ ಬಂದ ದೇವರು | ತಹಶೀಲ್ದಾರ್ ಮಾಡಿದ ಉಪಾಯ ಏನು ಗೊತ್ತಾ?

davanagere
30/11/2021

ದಾವಣಗೆರೆ: ತಹಶೀಲ್ದಾರ್ ಅಜ್ಜಿಯೊಬ್ಬರಿಗೆ ಕೊವಿಡ್ ಲಸಿಕೆ ಹಾಕಿಸಲು ಬಂದಾಗ, ಅಜ್ಜಿಯ ಮೈಮೇಲೆ ದೇವರು ಬಂದಿದ್ದು, ಸೂಜಿ ಹಾಕದಂತೆ ಅಜ್ಜಿಯ ಮೈಮೇಲೆ ಬಂದ ದೇವರು ತಹಶೀಲ್ದಾರ್ ಗೆ ಅವಾಜ್ ಹಾಕಿದ ಘಟನೆ ನಡೆದಿದ್ದು, ಈ ವೇಳೆ ತಹಶೀಲ್ದಾರ್ ಅವರು ಉಪಾಯವಾಗಿ ಅಜ್ಜಿಗೆ ಲಸಿಕೆ ಹಾಕಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.


Provided by

ಮೊನ್ನೆಯಷ್ಟೇ ಆರೋಗ್ಯ ಸಿಬ್ಬಂದಿ ಲಸಿಕೆ ಹಾಕಲು ಆಗಮಿಸಿದಾಗ ಅಜ್ಜಿಯ ಮೈಮೇಲೆ ದೇವರು ಬಂದಿದ್ದು, ಇದರಿಂದಾಗಿ ಏನು ಮಾಡಲು ತೋಚದೇ ಸಿಬ್ಬಂದಿ ಹೊರಟು ಹೋಗಿದ್ದರು. ಈ ವಿಡಿಯೋ ವೈರಲ್ ಆಗಿ, ಮಾಧ್ಯಮಗಳಲ್ಲಿ ಕೂಡ ವರದಿಯಾಗಿತ್ತು. ಈ ವರದಿಗಳನ್ನು ಗಮನಿಸಿದ ತಹಶೀಲ್ದಾರ್ ಅವರು ಖುದ್ದಾಗಿ ತಾವೇ ಅಜ್ಜಿಗೆ ಲಸಿಕೆ ಹಾಕಿಸಲು ಅಜ್ಜಿಯ ಮನೆಗೆ ತೆರಳಿದ್ದಾರೆ.

ತಹಶೀಲ್ದಾರ್ ಲಸಿಕೆ ಹಾಕಿಸಲು ಬಂದಿರುವುದು ತಿಳಿಯುತ್ತಿದ್ದಂತೆಯೇ, ಮತ್ತೆ ಅಜ್ಜಿಯ ಮೈಮೇಲೆ ದೇವರು ಬಂದಿದ್ದಾರೆ. “ಬಾ ಮಗನೆ ಬಾ, ನನ್ನ ಮಡಿಲಲ್ಲಿ ಹಾಕಿಕೊಳ್ತೀನಿ, ನಿನಗೆ ಒಂದು ಗುರಿ ಇದೆ, ಆ ಗುರಿಗೆ ನಾನು ಬಾಣ ಹೊಡೆಯುತ್ತೇನೆ. ನನ್ನ ಕೈಗೆ ನೀನು ಸೂಚಿ ಹಾಕಲು ಬಂದಿದ್ದೀಯಾ? ನಿನ್ನ ಬಲಗೈ ಬೇಕೋ ಬೇಡವೋ? ಎಂದು ತಹಶೀಲ್ದಾರ್ ಗೆ ಅಜ್ಜಿಯ ಮೈಮೇಲೆ ಬಂದಿದ್ದ ದೇವರು ಅವಾಜ್ ಹಾಕಿದೆ.


Provided by

ಈ ವೇಳೆ ತಹಶೀಲ್ದಾರ್ ಅವರು ಅಜ್ಜಿಯನ್ನು ಸಮಾಧಾನಪಡಿಸಿ,  ಅಜ್ಜಿ, ನಿನ್ನೆ ದೇವಿ ನನ್ನ ಕನಸಿನಲ್ಲಿ ಬಂದಿದ್ದಳು, ನಿನಗೆ ಲಸಿಕೆ ಹಾಕಿಸಲೇ ಬೇಕು ಅಂತ ದೇವಿ ಆಜ್ಞೆ ಮಾಡಿದ್ದಾಳೆ ಎಂದು ಮನವೊಲಿಸಲು ನೋಡಿದ್ದಾರೆ. ಆದರೂ ಅಜ್ಜಿ ಒಪ್ಪಿರಲಿಲ್ಲ. ಸಾಕಷ್ಟು ಹೊತ್ತಿನ ಬಳಿಕ ಅಜ್ಜಿಯನ್ನು ಮನವೊಲಿಸಿ, ಬಳಿಕ ಅಜ್ಜಿಗೆ ಲಸಿಕೆ ನೀಡಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡ ಅನಿಲ್ ಲಾಡ್ ವಿರುದ್ಧ ದೂರು ದಾಖಲು

ಹಿಂದೂಗಳ ಬೆಳವಣಿಗೆಯ ವಿರುದ್ಧ ಅಸಹನೆ ಬೆಳೆಯುತ್ತಿದೆ | ಪೇಜಾವರ ಶ್ರೀ

ಅಜ್ಜಿಯ ಜೊತೆಗೆ ಮದುವೆಗೆ ಬಂದಿದ್ದ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ!

ಕಲ್ಯಾಣ ಮಂಟಪಕ್ಕೆ ಬೆಂಕಿ ಬಿದ್ದರೂ, ನಿಶ್ಚಿಂತೆಯಿಂದ ಊಟ ಮುಂದುವರಿಸಿದ ಅತಿಥಿಗಳು! ವಿಡಿಯೋ ವೈರಲ್

ಅಪಘಾತದಲ್ಲಿ ಗಾಯಗೊಂಡಿದ್ದ ವೃದ್ಧನ ರಕ್ಷಣೆಗೆ ಮುಂದಾಗಿದ್ದ ಯುವಕನನ್ನು ಥಳಿಸಿಕೊಂದ ಗುಂಪು!

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹದ ಮೇಲೆ ರಾತ್ರಿಯಿಡೀ ಸಂಚರಿಸಿದ ವಾಹನಗಳು!

ಇತ್ತೀಚಿನ ಸುದ್ದಿ