ನಿನ್ನೆ ರಾತ್ರಿ ಎಲ್ಲರೊಂದಿಗೂ ನಗುತ್ತಲೇ ಮಾತನಾಡಿ ಮಲಗಿದ್ದ ದ್ವಾರಕೀಶ್‌! - Mahanayaka

ನಿನ್ನೆ ರಾತ್ರಿ ಎಲ್ಲರೊಂದಿಗೂ ನಗುತ್ತಲೇ ಮಾತನಾಡಿ ಮಲಗಿದ್ದ ದ್ವಾರಕೀಶ್‌!

dwarakish
16/04/2024


Provided by

ಕರ್ನಾಟಕದ ಕುಳ್ಳ ಎಂದೇ ಕರೆಯಲ್ಪಡುತ್ತಿದ್ದ, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕ, ನಟ ದ್ವಾರಕೀಶ್‌ ಹೃದಯಾಘಾತದಿಂದ ನಿಧನರಾಗಿದ್ದಾರೆ. ದ್ವಾರಕೀಶ್‌ ನಿಧನದ ಸುದ್ದಿ ಕನ್ನಡ ಚಿತ್ರರಂಗಕ್ಕೆ ಸಿಡಿಲು ಬಡಿದಂತೆ ಆಗಿದೆ.

ನಿನ್ನೆ ರಾತ್ರಿ ಎಲ್ಲರೊಂದಿಗೂ ನಗುತ್ತಲೇ ಮಾತನಾಡಿ ಮಲಗಿದ್ದ ದ್ವಾರಕೀಶ್‌, ಅವರಿಗೆ ಬೆಳಗಿನ ಜಾವ ಕಾಫಿ ಕುಡಿದ ನಂತರ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ.

ಬೆಳಗ್ಗೆ ಏಳುತ್ತಿದ್ದಂತೆ ದ್ವಾರಕೀಶ್‌ ಕಾಫಿ ಕುಡಿದಿದ್ದಾರೆ. ಸ್ವಲ್ಪ ಸಮಯದ ನಂತರ ಎಬ್ಬಿಸು ಎಂದು ನನಗೆ ಹೇಳಿದ್ದ ಅಪ್ಪ ಮತ್ತೆ ಮೇಲೆ ಏಳಲೇ ಇಲ್ಲ ಎಂದು ದ್ವಾರಕೀಶ್‌ ಹಿರಿಯ ಪುತ್ರ ಗಿರಿ ದ್ವಾರಕೀಶ್‌ ಮಾಧ್ಯಮಗಳೊಂದಿಗೆ ನೋವು ಹಂಚಿಕೊಂಡಿದ್ದಾರೆ.

ಹಿರಿಯ ನಟ ದ್ವಾರಕೀಶ್‌ 81ನೇ ವಯಸ್ಸಿಗೆ ಇಹಲೋಹ ತ್ಯಜಿಸಿದ್ದಾರೆ. ಯಾವುದೇ ಸಿನಿಮಾದಲ್ಲಿ ದ್ವಾರಕೀಶ್‌ ಇದ್ದಾರೆ ಎಂದರೆ ಆ ಚಿತ್ರದಲ್ಲಿ ಮನರಂಜನೆಗೆ ಕೊರತೆ ಇಲ್ಲವೆಂದೇ ಅರ್ಥ. ಹಾಗೇ ಅವರು ನಿರ್ದೇಶಿಸಿದ, ನಿರ್ಮಾಣ ಮಾಡಿದ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್‌ ಹಿಟ್‌ ಆಗಿವೆ. ದ್ವಾರಕೀಶ್‌ ಆಕ್ಷನ್‌ ಕಟ್‌ ಹೇಳಿರುವ ಜನಪ್ರಿಯ ಚಿತ್ರಗಳ ಲಿಸ್ಟ್‌ ಇಲ್ಲಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ