ಯೋಗಿಯ ನಾಡಲ್ಲಿ ಕಾನೂನಿಗಿಲ್ಲ ಬೆಲೆ: ಅತ್ಯಾಚಾರ ಮಾಡಿ ಜೈಲಿಗೋಗಿ ಮತ್ತೆ ಹೊರಬಂದು ಅದೇ ಯುವತಿಯನ್ನು ರೇಪ್ ಮಾಡಿದ ಕಿರಾತಕ - Mahanayaka
5:19 AM Wednesday 20 - August 2025

ಯೋಗಿಯ ನಾಡಲ್ಲಿ ಕಾನೂನಿಗಿಲ್ಲ ಬೆಲೆ: ಅತ್ಯಾಚಾರ ಮಾಡಿ ಜೈಲಿಗೋಗಿ ಮತ್ತೆ ಹೊರಬಂದು ಅದೇ ಯುವತಿಯನ್ನು ರೇಪ್ ಮಾಡಿದ ಕಿರಾತಕ

10/09/2024


Provided by

ಉತ್ತರ ಪ್ರದೇಶದಲ್ಲಿ ಕಾನೂನು ಎಷ್ಟು ಹದಗೆಟ್ಟಿದೆ ಅನ್ನೋದಕ್ಕೆ ಈ ಸುದ್ದಿಯೇ ಸಾಕ್ಷಿ. 17 ವರ್ಷದ ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದ ಪ್ರಕರಣದಲ್ಲಿ ವೀರ್ ನಾಥ್ ಪಾಂಡೆ ಜೈಲು ಸೇರಿದ್ದ. ಇದೀಗ ಆತ ಜಾಮೀನಿನ ಮೇಲೆ ಬಿಡುಗಡೆಗೊಂಡ ತಕ್ಷಣ ಪುನಃ ಅದೇ ಯುವತಿಯನ್ನು ಅಪಹರಿಸಿಕೊಂಡು ಹೋಗಿ ದಿನಗಳ ಕಾಲ ಅತ್ಯಾಚಾರ ನಡೆಸಿದ್ದಾನೆ. ಉತ್ತರ ಪ್ರದೇಶದ ಬದೋಹಿಯಲ್ಲಿ ಈ ಘಟನೆ ನಡೆದಿದೆ. ಬಿಹಾರ ಮೂಲದ ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಜೈಲಿನಿಂದ ಜಾಮೀನಿನ ಮೂಲಕ ಹೊರಬಂದ ಈತ ಆಗಸ್ಟ್ ಐದರಂದು ಮತ್ತೆ ಅದೇ ಹುಡುಗಿಯನ್ನು ಅಪಹರಿಸಿಕೊಂಡು ಹೋಗಿದ್ದ ಮತ್ತು ಒಂದು ತಿಂಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ಅತ್ಯಾಚಾರ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲ ಅತ್ಯಾಚಾರ ಪ್ರಕರಣವು 2024 ಮೇಯಲ್ಲಿ ನಡೆದಿತ್ತು.

ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಹೆತ್ತವರು ದೂರು ನೀಡಿದ ಬಳಿಕ ಈತನನ್ನು ಪೊಲಿಸರು ಬಂದಿಸಿದ್ದರು. ಸೆಪ್ಟೆಂಬರ್ ಎರಡರಂದು ಈತ ಈ ಯುವತಿಯನ್ನು ರೈಲ್ವೆ ಸ್ಟೇಷನ್ ಬಳಿ ಬಿಟ್ಟು ಹೋಗಿದ್ದ. ಬಳಿಕ ಪೊಲೀಸರಿಗೆ ಯುವತಿ ದೂರು ನೀಡುವುದರೊಂದಿಗೆ ಪ್ರಕರಣ ಬೆಳಕಿಗೆ ಬಂದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ