ನಿಮ್ಮ ಮಕ್ಕಳು ಮೊಬೈಲ್ ಪ್ರಿಯರಾ..? ಚಟದಿಂದ ಬಿಡಿಸುವುದು ಹೇಗೆ.? ಸ್ಪೀಡನ್ ನಿಂದ ಹೊಸ ರಿಸರ್ಚ್
ಮಕ್ಕಳು ಮೊಬೈಲ್ ಬಳಸುವುದರ ಬಗ್ಗೆ ಹೆಚ್ಚಿನ ಎಲ್ಲಾ ಹೆತ್ತವರಲ್ಲೂ ದೂರಿದೆ. ಮಕ್ಕಳು ಮೊಬೈಲ್ ಚಟ ಬೆಳೆಸಿಕೊಳ್ಳುತ್ತಿದ್ದಾರೆ ಅನ್ನುವುದು ಸಾಮಾನ್ಯ ದೂರು. ಮಕ್ಕಳನ್ನು ಈ ಚಟದಿಂದ ಬಿಡಿಸುವುದು ಹೇಗೆ ಎಂಬುದು ಹೆತ್ತವರ ತಲೆ ತಿನ್ನುವ ಬಹುದೊಡ್ಡ ಪ್ರಶ್ನೆ. ಮಕ್ಕಳು ಕಲಿಕೆಯ ಕಡೆಗೆ ಆಸಕ್ತಿ ವಹಿಸುತ್ತಿಲ್ಲ. ಅವರನ್ನು ಮೊಬೈಲ್ ಹಾಳ್ ಮಾಡ್ತಾ ಇದೆ ಎಂದು ಹೆತ್ತವರು ಸಾಮಾನ್ಯವಾಗಿ ದೂರ್ತಾ ಇರ್ತಾರೆ. ಇದೀಗ ಸ್ವೀಡನ್ ಈ ಕುರಿತಂತೆ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಸ್ವೀಡನ್ನಿನ ಆರೋಗ್ಯ ಸಚಿವಾಲಯವು ಇದೀಗ ವಿವಿಧ ವಯಸ್ಸಿನವರಿಗೆ ಮೊಬೈಲ್ ಬಳಸುವ ಸಮಯವನ್ನು ಅಥವಾ ಸ್ಕ್ರೀನ್ ಟೈಮ್ ಅನ್ನು ನಿಗದಿಪಡಿಸಿದೆ. ಇದರ ಪ್ರಕಾರ ಎರಡು ವಯಸ್ಸಿನವರೆಗಿನ ಮಕ್ಕಳಿಗೆ ಯಾವ ಕಾರಣಕ್ಕೂ ಮೊಬೈಲ್ ಅನ್ನು ನೀಡಲೇಬಾರದು.
ಎರಡರಿಂದ ಐದು ವಯಸ್ಸಿನವರೆಗಿನ ಮಕ್ಕಳಿಗೆ ದಿನದಲ್ಲಿ ಒಂದು ಗಂಟೆಯಷ್ಟು ಸಮಯವನ್ನು ಮೊಬೈಲ್ ನೋಡುವುದಕ್ಕೆ ಕೊಡಬಹುದಾಗಿದೆ. ಐದು ವಯಸ್ಸಿನಿಂದ ಹನ್ನೆರಡು ವಯಸ್ಸಿನವರೆಗಿನ ಮಕ್ಕಳು ಎರಡು ಗಂಟೆಗಳ ಕಾಲ ಮೊಬೈಲ್ ವೀಕ್ಷಿಸಬಹುದಾಗಿದೆ. 12 ರಿಂದ 18 ವಯಸ್ಸಿನವರೆಗಿನ ಮಕ್ಕಳು ದಿನದಲ್ಲಿ ಮೂರು ಗಂಟೆ ಮೊಬೈಲ್ ವೀಕ್ಷಿಸಬಹುದಾಗಿದೆ. ಈ ಕ್ರಮವನ್ನು ಅನುಸರಿಸಿದರೆ ಮಕ್ಕಳು ಮೊಬೈಲ್ ಚಟಕ್ಕೆ ಬೀಳಲಾರರು ಎಂದು ಸ್ವೀಡನ್ ನ ಆರೋಗ್ಯ ಸಚಿವಾಲಯ ತಿಳಿಸಿದೆ ಮತ್ತು ಹೆತ್ತವರು ಈ ಕ್ರಮವನ್ನು ಅನುಸರಿಸಿ ಎಂದು ಸೂಚಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth