ಬೇಟೆಯಾಡುವ ಭರದಲ್ಲಿ ಬಾವಿಗೆ ಬಿದ್ದ ಚಿರತೆ ಮರಿಯ ರಕ್ಷಣೆ! - Mahanayaka

ಬೇಟೆಯಾಡುವ ಭರದಲ್ಲಿ ಬಾವಿಗೆ ಬಿದ್ದ ಚಿರತೆ ಮರಿಯ ರಕ್ಷಣೆ!

Leopard
25/11/2024

ಕಾರ್ಕಳ: ಮನೆಯೊಂದರ ಬಾವಿಗೆ ಬಿದ್ದಿದ್ದ ಮರಿ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅರಂತ ಬೆಟ್ಟು ದರ್ಖಾಸ್ ಬಳಿ ನಡೆದಿದೆ.

ಆಹಾರ ಅರಸಿ ಬಂದಿದ್ದ ಚಿರತೆ ಮರಿ, ಬೇಟೆಯಾಡಲು ಓಡುತ್ತಿದ್ದ ವೇಳೆ ಆಯತಪ್ಪಿ ತೆರೆದ ಬಾವಿಗೆ ಬಿದ್ದಿದೆ. ಮುಂಜಾನೆ ಸ್ಥಳೀಯರು, ಬಾವಿಯಲ್ಲಿರುವ ಚಿರತೆ ಮರಿಯನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಬಳಿಕ ಸ್ಥಳೀಯರ ಸಹಕಾರದೊಂದಿಗೆ ಬೋನು ಮತ್ತು ಬಲೆಯನ್ನು ಹರಡಿ ಚಿರತೆಯನ್ನು ಬಾವಿಯಿಂದ ಸುರಕ್ಷಿತವಾಗಿ ಬಾವಿಯಿಂದ ಮೇಲೆತ್ತಿ ರಕ್ಷಿಸಲಾಯಿತು.
ಸುಮಾರು 1 ವರ್ಷದ ಚಿರತೆ ಮರಿ ಇದಾಗಿದೆ. ಪಶುವೈದ್ಯಾಧಿಕಾರಿ ವಾಸುದೇವ್ ಅವರು ಚಿರತೆಯ ಆರೋಗ್ಯ ತಪಾಸಣೆ ನಡೆಸಿದರು.

ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಎಸಿಎಫ್ ಪಿ ಶ್ರೀಧರ್, ಆರ್ ಎಫ್ ಒ ಪ್ರಭಾಕರ್ ಕುಲಾಲ್, ಡಿಆರ್ ಎಫ್ ಒ ಹುಕ್ರಪ್ಪಗೌಡ, ಸಿಬ್ಬಂದಿ ಹಾಗೂ ಸ್ಥಳೀಯ ನಾಗರಿಕರು ಭಾಗವಹಿಸಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ