ಅರಣ್ಯ ಇಲಾಖೆಯ ಬೋನಿನನಲ್ಲಿ ಬಂಧಿಯಾದ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಚಿರತೆ - Mahanayaka

ಅರಣ್ಯ ಇಲಾಖೆಯ ಬೋನಿನನಲ್ಲಿ ಬಂಧಿಯಾದ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಚಿರತೆ

leopard
16/10/2023

ಚಾಮರಾಜನಗರ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಚಿರತೆ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದ್ದು, ಇದೀಗ ಚಿರತೆಯನ್ನು ಸುರಕ್ಷಿತವಾಗಿ  ಸೆರೆ ಹಿಡಿಯಲಾಗಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲ ಗ್ರಾಮದಲ್ಲಿ ಚಿರತೆ ಸೆರೆಯಾಗಿದೆ. ಕಳೆದ ಒಂದು ತಿಂಗಳಿಂದ ಓಡಾಡುತ್ತಿದ್ದ ಚಿರತೆ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತ್ತು.

ಚಿರತೆಯ ಭಯದಿಂದ ಜನರು ಮನೆಯಿಂದ ಹೊರಗೆ ಬರಲು, ಜಮೀನುಗಳಿಗೆ ಹೋಗಲು ಹೆದರುತ್ತಿದ್ದರು. ರೈತರ ಹಸುಗಳನ್ನು ಬಲಿ ಪಡೆದಿದ್ದ ಚಿರತೆ ರೈತರಿಗೆ ತೀವ್ರ ಆತಂಕ ಸೃಷ್ಟಿಸಿತ್ತು.

ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನು ಇರಿಸಿದ್ದು, ಗುಂಡೇಗಾಲದ ಹೊರವಲಯದಲ್ಲಿ ಇರಿಸಿದ್ದ ಬೋನಿನೊಳಗೆ ಇಂದು ಬೆಳಗ್ಗೆ ಚಿರತೆ  ಬಂಧಿಯಾಗಿದೆ.

ಚಿರತೆ ಬೋನಿಗೆ ಬಿದ್ದ ಸುದ್ದಿಕೇಳಿ ಸಾರ್ವಜನಿಕರು ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಮನೆಯಿಂದ ಹೊರ ಬರಲು ಕೂಡ ಜನರು ಆತಂಕ ಪಡುವಂತಾಗಿತ್ತು.

ಇತ್ತೀಚಿನ ಸುದ್ದಿ