ಮನೆಗೆ ಬಡಿದ ಸಿಡಿಲು: ಮಹಿಳೆ ಮತ್ತು 5 ವರ್ಷದ ಮಗುವಿಗೆ ಗಾಯ - Mahanayaka

ಮನೆಗೆ ಬಡಿದ ಸಿಡಿಲು: ಮಹಿಳೆ ಮತ್ತು 5 ವರ್ಷದ ಮಗುವಿಗೆ ಗಾಯ

lightning strikes house
17/10/2023


Provided by

ಸಿಡಿಲು ಬಡಿದು ಮನೆಗೆ ಹಾನಿಯಾದ ಘಟನೆ ಮಂಗಳೂರು ನಗರ ಹೊರವಲಯದ ವಾಮಂಜೂರು ಅಮೃತ ನಗರದಲ್ಲಿ ನಡೆದಿದೆ‌.

ಗೋಪಾಲ ಪೂಜಾರಿ ಎಂಬುವವರ ಮನೆಗೆ ಸಿಡಿಲು ಬಡಿದಿದೆ. ಸಿಡಿಲು ಬಡಿದ ಪರಿಣಾಮ ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಸ್ವಿಚ್ ಬೋರ್ಡ್ ಹಾಗೂ ಮೀಟರ್ ಬಾಕ್ಸ್ ಗೆ ಹಾನಿಯಾಗಿದೆ. ಮನೆಯಲ್ಲಿದ್ದ ಮಹಿಳೆ ಹಾಗೂ 5 ವರ್ಷದ ಮಗುವಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂದರ್ಭ ಮನೆಯಲ್ಲಿ ನಾಲ್ಕು ಮಂದಿ ಇದ್ದರು.

ಇತ್ತೀಚಿನ ಸುದ್ದಿ