ಈಕೆಯ ಜೊತೆ ಲೈಂಗಿಕ ಸಂಬಂಧ ಹೊಂದಿದ 200 ಪುರುಷರ ಜೀವ ಈಗ ಅಪಾಯದಲ್ಲಿದೆ! - Mahanayaka

ಈಕೆಯ ಜೊತೆ ಲೈಂಗಿಕ ಸಂಬಂಧ ಹೊಂದಿದ 200 ಪುರುಷರ ಜೀವ ಈಗ ಅಪಾಯದಲ್ಲಿದೆ!

linda lessess
21/05/2024


Provided by

ಅಮೆರಿಕಾ:  ತನಗೆ ಹೆಚ್ ಐವಿ ಪಾಸಿಟಿವ್ ಇದೆ ಎನ್ನುವುದು ಗೊತ್ತಿದ್ದರೂ ಲೈಂಗಿಕ ಕಾರ್ಯಕರ್ತೆಯೊಬ್ಬಳು ಸುಮಾರು 200ಕ್ಕೂ ಅಧಿಕ ಪುರುಷರ ಜೊತೆಗೆ ಲೈಂಗಿಕ ಸಂಬಂಧ ಹೊಂದಿದ್ದು, ಇದರಿಂದಾಗಿ ಇದೀಗ 200ಕ್ಕೂ ಅಧಿಕ ಪುರುಷರ ಜೀವ ಅಪಾಯದಲ್ಲಿದೆ.

ಈ ಘಟನೆ ನಡೆದಿರೋದು ಅಮೆರಿಕದ ಓಹಿಯೋ ರಾಜ್ಯದಲ್ಲಿ.  ಸದ್ಯ ಈ ಕೃತ್ಯ ನಡೆಸಿರುವ ಮಹಿಳೆಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

30 ವರ್ಷದ ಲೈಂಗಿಕ ಕಾರ್ಯಕರ್ತೆ ಲಿಂಡಾ ಲೆಸೆಸೆಸ್ ಗೆ ಹೆಚ್ ಐವಿ ಪಾಸಿಟಿವ್ ಇತ್ತು. ಆದರೆ ಆಕೆ ತನಗೆ ಹೆಚ್ ಐವಿ ಇದೆ ಎನ್ನುವುದು ಗೊತ್ತಿದ್ದರೂ ಪುರುಷರನ್ನು ಸೆಳೆದು ಲೈಂಗಿಕ ಸಂಪರ್ಕ ಹೊಂದುತ್ತಿದ್ದಳು.

ಮೇ 13ರಂದು ಈಕೆ ಮಾರ್ಕೆಟ್ ಸ್ಟ್ರೀಟ್‌ ನಲ್ಲಿ ಲೈಂಗಿಕ ಕ್ರಿಯೆಗೆ ಪ್ರಚೋದನೆ ನೀಡಿದ ಕೇಸ್ ನಲ್ಲಿ  ಬಂಧಿತಳಾಗಿದ್ದಳು. ಆಕೆಯನ್ನು ಪೊಲೀಸರು ಪರೀಕ್ಷೆಗೊಳಪಡಿಸಿದಾಗ ಆಕೆ ಎಚ್ ಐವಿ ಪೀಡಿತೆ ಎನ್ನುವುದು ತಿಳಿದು ಬಂದಿತ್ತು.

ವಿಚಾರಣೆ ವೇಳೆ ಆಕೆ, ತನಗೆ ಹೆಚ್ ಐವಿ ಇರುವುದು ಸುಮಾರು ಎರಡು ವರ್ಷಗಳ ಹಿಂದೆಯೇ ಗೊತ್ತಿತ್ತು ಎಂದು ಒಪ್ಪಿಕೊಂಡಿದ್ದಾಳೆ.  ಅಲ್ಲದೇ ಈವರೆಗೆ 211 ಮಂದಿ ತನ್ನೊಂದಿಗೆ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾಳೆ.

ಇದೀಗ ಲಿಂಡಾ ಜೊತೆಗೆ ಸಂಪರ್ಕ ಹೊಂದಿದ ಪುರುಷರು ಪ್ರಾಮಾಣಿಕವಾಗಿ ಹೊರ ಬಂದು ಆರೋಗ್ಯ ತಪಾಸಣೆ ಮಾಡಿಕೊಳ್ಳುವಂತೆ ಪೊಲೀಸರು ಸಲಹೆ ನೀಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ