ಲಂಡನ್ ಇಫ್ತಾರ್ ಕೂಟದಲ್ಲಿ ಫೆಲೆಸ್ತೀನಿಯರಿಗಾಗಿ 27 ಲಕ್ಷ ದೇಣಿಗೆ ಸಂಗ್ರಹ - Mahanayaka
11:13 PM Friday 12 - December 2025

ಲಂಡನ್ ಇಫ್ತಾರ್ ಕೂಟದಲ್ಲಿ ಫೆಲೆಸ್ತೀನಿಯರಿಗಾಗಿ 27 ಲಕ್ಷ ದೇಣಿಗೆ ಸಂಗ್ರಹ

21/03/2024

ಲಂಡನ್‌ನಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಫೆಲೆಸ್ತೀನಿಯರಿಗಾಗಿ ಸುಮಾರು 27 ಲಕ್ಷ ರೂಪಾಯಿ ಸಂಗ್ರಹಿಸಲಾದ ವಿಶೇಷ ಘಟನೆ ನಡೆದಿದೆ. ಬ್ರಿಟನಿನ ಫೆಲೆಸ್ತೀನ್ ಫೋರಂ ನ ನೇತೃತ್ವದಲ್ಲಿ ನಡೆಸಲಾದ ಎಂಟನೇ ಇಫ್ತಾರ್ ಕೂಟ ಇದಾಗಿದೆ. ಸಾವಿರಕ್ಕಿಂತಲೂ ಅಧಿಕ ಮಂದಿ ಈ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.

ನಾವಿಲ್ಲಿ ಉತ್ತಮ ಫಲಹಾರಗಳ ಜೊತೆ ಇಫ್ತಾರ್‌ಗೆ ಕೂತಿರುವಾಗ ಗಾಝಾದಲ್ಲಿ ಲಕ್ಷಾಂತರ ಮಂದಿ ಕುಡಿಯುವ ನೀರೂ ಇಲ್ಲದೆ ಹೊಟ್ಟೆಗೆ ಅನ್ನವೂ ಇಲ್ಲದೇ ಸಂಕಟ ಪಡುತ್ತಿರುವುದು ನೆನಪಿರಲಿ ಎಂದು ಕಾರ್ಯಕ್ರಮ ಆಯೋಜಿಸಿದ ಅದ್ ನಾನ್ ಹಿಂದಾನ್ ಅವರು ನೆರೆದವರನ್ನು ಉದ್ದೇಶಿಸಿ ಹೇಳಿದರು. ಅವರಲ್ಲಿ ಧೈರ್ಯ ತುಂಬುವುದು ನಮ್ಮ ಕರ್ತವ್ಯವಾಗಿದೆ ಎಂದು ಕೂಡ ಅವರು ಹೇಳಿದ್ರು. ಆ ಬಳಿಕ ನೆರೆದವರು ಭಾರಿ ಸಂಖ್ಯೆಯಲ್ಲಿ ಗಾಝಾ ಮಂದಿಗೆ ದೇಣಿಗೆ ನೀಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ