ಗ್ರಾಮ ಪಂಚಾಯತ್ ಗೆ ಪಿಡಿಒ ನೇಮಕಾತಿ ಮಾಡುವಂತೆ ಏಕಾಂಗಿ ಪ್ರತಿಭಟನೆ
ಕೊಟ್ಟಿಗೆಹಾರ: ಗ್ರಾಮ ಪಂಚಾಯತ್ ಗೆ ಪಿಡಿಒ ನೇಮಕಾತಿ ಮಾಡುವಂತೆ ಆಗ್ರಹಿಸಿ ಕೊಟ್ಟಿಗೆಹಾರ ಗ್ರಾಮದ ನಿವಾಸಿ ಸಂಜಯ್ ಏಕಾಂಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪಿಡಿಒ ಇಲ್ಲದೇ ಪಿಡಿಒ ಇಲ್ಲದೆ 15ನೇ ಹಣಕಾಸು ಆಯೋಗದ ಹಣ ಪ್ರಯೋಜನವಾಗುತ್ತಿಲ್ಲ ಎಂದು ಅವರು ಆರೋಪಿಸಿದ್ದು, ತರುವೆ ಗ್ರಾ.ಪಂ ಮುಂದೆ ಕುಳಿತು ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ತರುವೆ ಗ್ರಾಪಂ ಮುಂದೆ ಸಂಜಯ್ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಕೂಡಲೇ ಕಾಯಂ ಪಿಡಿಒ ನೇಮಕಾತಿ ಮಾಡಬೇಕು, ಇಲ್ಲದಿದ್ದರೆ ಏಕಾಂಗಿ ಹೋರಾಟ ಮುಂದುವರಿಸೋ ಎಚ್ಚರಿಕೆ ನೀಡಿದ್ದಾರೆ.
ಹಲವು ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ ಸಮಸ್ಯೆ ಇದೆ, ಪಿಡಿಒ ಇಲ್ಲದೆ ಯಾವ ಕೆಲಸ ಕಾರ್ಯಗಳು ಆಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97