ಒಂಟಿ ಸಲಗ ನೈಟ್ ರೌಂಡ್ಸ್: ಕಾಫಿನಾಡ ಹಳ್ಳಿಗರಿಗೆ ಕಾಡಾನೆ ಗೋಳು
16/12/2024
ಚಿಕ್ಕಮಗಳೂರು: ಕಾಫಿನಾಡ ಹಳ್ಳಿಗರಿಗೆ ಕಾಡಾನೆ ಗೋಳು ಮುಗಿಯದೇ ಕಾಡುತ್ತಿದೆ. ಕೆ.ಆರ್.ಪೇಟೆ ಗ್ರಾಮದಲ್ಲಿ ಒಂಟಿ ಸಲಗ ನೈಟ್ ರೌಂಡ್ಸ್ ಹೊಡೆದು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿದೆ.
ರಾತ್ರಿ ಗ್ರಾಮದ ರಸ್ತೆಗಳಲ್ಲಿ ಒಂಟಿ ಸಲಗ ಓಡಾಡಿದೆ. ಒಂಟಿ ಸಲಗದ ವಿಲ್ಹೇಜ್ ರೌಂಡ್ಸ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾಡಾನೆ ಗ್ರಾಮಕ್ಕೆ ಬಂದದ್ದು ಗೊತ್ತಾಗಿ ಮನೆಯಿಂದ ಹೊರ ಬಂದ ಜನರು ಆತಂಕ ವ್ಯಕ್ತಪಡಿಸಿದರು.
ಕಾಡಾನೆ ಓಡಾಟದಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಹಾಸನದಿಂದ ನಿರಂತರವಾಗಿ ಕಾಡಾನೆಗಳು ಆಗಮಿಸುತ್ತಿದೆ. ಕಾಡಾನೆಯನ್ನ ಸ್ಥಳಾಂತರ ಮಾಡುವಂತೆ ಸ್ಥಳೀಯರ ಆಗ್ರಹಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: