ನಿಲ್ಲಿಸಿದ್ದ ಮಿನಿ ಗೂಡ್ಸ್ ವಾಹನಕ್ಕೆ ಲಾರಿ ಡಿಕ್ಕಿ

20/10/2023
ಚಿಕ್ಕಮಗಳೂರು: ನಿಲ್ಲಿಸಿದ ಮಿನಿ ಗೂಡ್ಸ್ ವಾಹನಕ್ಕೆ ಹಿಂಬದಿಯಿಂದ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಮಿನಿ ಗೂಡ್ಸ್ ಪಲ್ಟಿಯಾಗಿದೆ. ನಿದ್ರೆ ಬರುತ್ತಿದ್ದೆ ಅಂತಾ ರಸ್ತೆ ಬದಿಗೆ ನಿಲ್ಲಿಸಿ ಮಿನಿ ಗೂಡ್ಸ್ ನಲ್ಲೇ ಚಾಲಕ ಮಲಗಿದ್ದ. ಈ ವೇಳೆ ಅಶೋಕ್ ಲೈಲ್ಯಾಂಡ್ ಲಾರಿಯ ಚಾಲಕ ವೇಗವಾಗಿ ಬಂದು ನಿದ್ರೆ ಮಂಪರಿನಲ್ಲಿ ಮಿನಿ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಘಟನೆಯಿಂದಾಗಿ ಎರಡು ವಾಹನಗಳು ಫುಲ್ ಜಖಂ ಆಗಿದೆ. ಲಾರಿ ಬೆಂಗಳೂರಿನಿಂದಾ ಮಂಗಳೂರಿಗೆ ಪ್ರೊಫೆಷನಲ್ ಕೋರಿಯರ್ ತೆಗೆದುಕೊಂಡು ಹೋಗುತ್ತಿತ್ತು. ಬೇಲೂರಿನಿಂದ ಮೂಡಬಿದ್ರೆ ಗೆ ಫೀಡ್ಸ್ ಲೋಡಾಗಿದ್ದ ಗೂಡ್ಸ್ ಮಿನಿ ವಾಹನ ರಸ್ತೆ ಬದಿಯಲ್ಲಿ ನಿಂತಿದ್ದ ವಾಹನವಾಗಿದೆ. ರಾಷ್ಟ್ರೀಯ ಹೆದ್ದಾರಿ ಬಣಕಲ್ ನಲ್ಲಿ ನಡೆದ ಅಪಘಾತ ಸಂಭವಿಸಿದೆ.