ಮಗಳ ಮೃತದೇಹವನ್ನು ಹೆಗಲಲ್ಲಿ ಎತ್ತಿಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ ತಂದೆ! - Mahanayaka
5:44 AM Wednesday 28 - January 2026

ಮಗಳ ಮೃತದೇಹವನ್ನು ಹೆಗಲಲ್ಲಿ ಎತ್ತಿಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ ತಂದೆ!

panjab
15/05/2021

ಚಂಡೀಗಢ:  ಕೊರೊನಾದಿಂದ ಮೃತಪಟ್ಟ ತನ್ನ ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ತಂದೆಯೋರ್ವರು  ಅಂತ್ಯಸಂಸ್ಕಾರ ನಡೆಸಿದ ಘಟನೆ  ಪಂಜಾಬ್ ನ ಜಲಂಧರ್ ನಲ್ಲಿ ನಡೆದಿದೆ.

ಜಲಂಧರ್ ನ ರಾಮನಗರ ನಿವಾಸಿ ದಿಲೀಪ್ ಕುಮಾರ್ ಎಂನವರ 11 ವರ್ಷದ ಮಗಳಿಗೆ ಕೊರೊನಾ ದೃಢವಾಗಿದ್ದರಿಂದ ಜಲಂಧರ್ ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಕೆಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅಮೃತಸರಕ್ಕೆ ಕೊಂಡೊಯ್ಯುವಂತೆ ಅಲ್ಲಿನ ಸಿಬ್ಬಂದಿ ಹೇಳಿ ಡಿಸ್ಚಾರ್ಜ್ ಮಾಡಿದ್ದಾರೆ.

ಇತ್ತ ಮಗಳನ್ನು ಬೇರೆ ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಸಿಗದೇ ತಂದೆ ಪರದಾಡುತ್ತಿರುವ ನಡುವೆಯೇ ಮಗಳು ಕೊನೆಯುಸಿರೆಳೆದಿದ್ದಾಳೆ.  ಆದರೂ ಆಂಬುಲೆನ್ಸ್ ಸಿಗಲೇ ಇಲ್ಲ. ಕೊನೆಗೆ ಏನೂ ತೋಚದೇ ತಂದೆ ದಿಲೀಪ್ ಕುಮಾರ್ ಮಗಳ ಮೃತದೇಹವನ್ನು ಹೆಗಲಲ್ಲಿಯೇ ಹೊತ್ತುಕೊಂಡು ಹೋಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

 ಸಾಂದರ್ಭಿಕ ಚಿತ್ರ

ಇತ್ತೀಚಿನ ಸುದ್ದಿ