ಚುನಾವಣಾ ಕಾವು: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಇಬ್ಬರು ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖ್ಬೀರ್ ಸಿಂಗ್ ಸಂಧು ಅವರು ಬಹುನಿರೀಕ್ಷಿತ ಚುನಾವಣೆಯ ವಿವರಗಳನ್ನು ಪ್ರಕಟಿಸಿದರು. ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 3ಕ್ಕೆ ಕೊನೆಗೊಳ್ಳಲಿದೆ.
ಭಾರತದ ಚುನಾವಣಾ ಆಯೋಗದ ಟ್ರೆಂಡ್ ಗಳ ಪ್ರಕಾರ, 288 ವಿಧಾನಸಭಾ ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ಮಹಾರಾಷ್ಟ್ರ ರಾಜ್ಯದಲ್ಲಿ 9.63 ಕೋಟಿ ನೋಂದಾಯಿತ ಮತದಾರರಿದ್ದು, 4.97 ಕೋಟಿ ಪುರುಷ ಮತದಾರರು ಮತ್ತು 4.66 ಕೋಟಿ ಮಹಿಳಾ ಮತದಾರರು ಇದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಗ್ರಾಮೀಣ ಪ್ರದೇಶದಲ್ಲಿ 39,048 ಮತ್ತು ನಗರ ಪ್ರದೇಶದಲ್ಲಿ 13,741 ಸೇರಿದಂತೆ ಒಟ್ಟು 52,789 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2024 ಸಂಪೂರ್ಣ ವೇಳಾಪಟ್ಟಿ:
ನಾಮಪತ್ರ ಸಲ್ಲಿಕೆ ಆರಂಭ ದಿನಾಂಕ: 22-10-24
ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ : 29-10-24
ನಾಮಪತ್ರ ಪರಿಶೀಲನೆ: 30-10-24
ನಾಮಪತ್ರ ಹಿಂಪಡೆಯುವಿಕೆ: 4-11-24
ಮತದಾನ ದಿನಾಂಕ: 20-11-24
ಫಲಿತಾಂಶ ಎಣಿಕೆ ದಿನಾಂಕ: 23-11-24
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth