ಸ್ಪೀಕರ್ ಓಂಬಿರ್ಲಾ ಪುತ್ರಿಗೆ ಅವಮಾನ ಆರೋಪ: ಯೂಟ್ಯೂಬರ್ ಧ್ರುವ್ ರಾಥಿ ವಿರುದ್ಧ ಕೇಸ್ - Mahanayaka

ಸ್ಪೀಕರ್ ಓಂಬಿರ್ಲಾ ಪುತ್ರಿಗೆ ಅವಮಾನ ಆರೋಪ: ಯೂಟ್ಯೂಬರ್ ಧ್ರುವ್ ರಾಥಿ ವಿರುದ್ಧ ಕೇಸ್

13/07/2024

ಖ್ಯಾತ ಯೂಟ್ಯೂಬರ್ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ಆಗಿರುವ ಧ್ರುವ್ ರಾಥಿ ವಿರುದ್ಧ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸ್ಪೀಕರ್ ಓಮ್ ಬಿರ್ಲಾ ಅವರ ಮಗಳಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಹೊರಿಸಿ ಈ ಕೇಸು ದಾಖಲಾಗಿದೆ.

ಸ್ಪೀಕರ್ ಓಂ ಬಿರ್ಲಾ ಅವರ ಮಗಳು ಅಂಜಲಿ ಪರೀಕ್ಷೆ ಬರೆಯದೆಯೇ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಧ್ರುವ್ ರಾಥಿ ಟ್ವೀಟ್ ಮಾಡಿದ್ದಾರೆ ಎಂಬುದು ಅವರ ಮೇಲಿನ ಆರೋಪ. ರಾತಿ ವಿರುದ್ಧ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪರೀಕ್ಷೆ ಬರೆಯದೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗುವ ಏಕೈಕ ರಾಷ್ಟ್ರ ಭಾರತವಾಗಿದೆ.

ಇದಕ್ಕೆ ನೀವು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಮಗಳಾಗಿ ಜನಿಸಬೇಕು. ಪರೀಕ್ಷೆ ಬರೆಯದೆ ಓಂ ಬಿರ್ಲಾ ಅವರ ಮಗಳು ಅಂಜಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಧೃವ್ ರಾತಿ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಧ್ರುವ್ ರಾಥಿ ಪರೋಡಿ ಎಂಬ ಖಾತೆಯಿಂದ ಈ ಟ್ವೀಟ್ ಮಾಡಲಾಗಿದ್ದು ಇದು ಧ್ರುವ್ ರಾಥಿ ಅವರ ಅಧಿಕೃತ ಖಾತೆ ಅಲ್ಲ, ಅದು ಅವರನ್ನು ವಿಡಂಬನೆ ಮಾಡುವ ಖಾತೆ ಎಂದು ಹೇಳಲಾಗುತ್ತಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.


Provided by
Provided by

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ