ಪೌರತ್ವಕ್ಕೆ ಧರ್ಮವನ್ನು ಮಾನದಂಡ ಮಾಡಿರುವುದು ತಪ್ಪು: ಅಮೆರಿಕದ ನಿಯೋಗ ಆಕ್ಷೇಪ

ಸಿಎಎ ವಿರುದ್ಧ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿರುವ ಅಪಮಾನವನ್ನು ಅಮೆರಿಕದ ನಿಯೋಗವು ಆಕ್ಷೇಪ ವ್ಯಕ್ತಪಡಿಸಿದೆ. ಧರ್ಮ ಅಥವಾ ನಂಬಿಕೆಯ ಆಧಾರದಲ್ಲಿ ಯಾರಿಗೂ ಪೌರತ್ವ ನಿಷೇಧಿಸುವುದು ಸಲ್ಲ ಎಂದು ಅದು ವಿರೋಧ ವ್ಯಕ್ತಪಡಿಸಿದೆ.
ಪೌರತ್ವಕ್ಕೆ ಧರ್ಮವನ್ನು ಮಾನದಂಡ ಮಾಡಿರುವುದು ತಪ್ಪು. ನಿಜವಾಗಿ ಈ ನಿಯಮದ ಉದ್ದೇಶ ದೌರ್ಜನ್ಯ ಕ್ಕೊಳಗಾದ ಅಲ್ಪಸಂಖ್ಯಾತ ವಿಭಾಗದವರಿಗೆ ಭದ್ರತೆ ಕೊಡುವುದು ಎಂದಾದರೆ ಮ್ಯಾನ್ಮಾರ್ನಿಂದ ದೌರ್ಜನ್ಯಕ್ಕೆ ಒಳಗಾಗಿ ಬಂದ ರೋಹಿಂಗ್ಯನ್ ಮುಸ್ಲಿಮರನ್ನೂ ಪಾಕಿಸ್ತಾನದಿಂದ ಬಂದಿರುವ ಅಹಮದೀಯ ಮುಸ್ಲಿಮರನ್ನೂ ಆಫ್ಘಾನಿಸ್ತಾನದಿಂದ ಬಂದಿರುವ ಹಜಾರ ಮತ್ತು ಶಿಯಾ ಮುಂತಾದ ಮುಸ್ಲಿಮರನ್ನೂ ಇದರ ಒಳಗಡೆ ಸೇರಿಸಿಕೊಳ್ಳಬೇಕಾಗಿತ್ತು ಎಂದು ಆಯೋಗ ಹೇಳಿದೆ.
ಶ್ರೀಲಂಕಾದಿಂದ ಪಲಾಯನ ಮಾಡಿ ಬಂದಿರುವ ತಮಿಳು ನಿರಾಶ್ರಿತರು, ಚೀನಾದಿಂದ ಪಲಾಯನ ಮಾಡಿ ಬಂದಿರುವ ಉಯಿಗೂರ್ ಮತ್ತು ತುರುಕಿ ಮುಸ್ಲಿಮರು ಸಹಿತ ದೌರ್ಜನ್ಯ ಕ್ಕೊಳಗಾದ ವಿವಿಧ ಜನರಿಗೆ ಈ ನಿಯಮದಿಂದ ಅನ್ಯಾಯವಾಗಿದೆ ಎಂದು ಅದು ಹೇಳಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth