ಅಯ್ಯಪ್ಪ ಮಾಲಾಧಾರಿಗಳಿಗೆ ಮಸೀದಿಯಲ್ಲಿ ತಂಗಲು, ಪೂಜೆ ಮಾಡಲು ಅವಕಾಶ ನೀಡಿ ಭಾವೈಕ್ಯತೆ ಮೆರೆದ ಮುಸ್ಲಿಮ್ ಧರ್ಮಗುರು - Mahanayaka
10:29 AM Wednesday 22 - October 2025

ಅಯ್ಯಪ್ಪ ಮಾಲಾಧಾರಿಗಳಿಗೆ ಮಸೀದಿಯಲ್ಲಿ ತಂಗಲು, ಪೂಜೆ ಮಾಡಲು ಅವಕಾಶ ನೀಡಿ ಭಾವೈಕ್ಯತೆ ಮೆರೆದ ಮುಸ್ಲಿಮ್ ಧರ್ಮಗುರು

ayyappa
06/01/2024

ಕೊಡಗು: ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಆಶ್ರಯ ನೀಡುವ ಮೂಲಕ ಧರ್ಮ ಗುರುಗಳೊಬ್ಬರು ಭಾವೈಕ್ಯತೆ ಮೆರೆದಿದ್ದಾರೆ.

ಬೆಳಗಾವಿಯಿಂದ ಶಬರಿಮಲೆಗೆ ಹೊರಟಿದ್ದ ಅಯ್ಯಪ್ಪ ಮಾಲಾಧಾರಿಗಳು ಮಳೆ ಮತ್ತು ಕತ್ತಲಾದ ಕಾರಣ ಮಸೀದಿಯ ಧರ್ಮ ಗುರುಗಳಿಗೆ ತಂಗಲು ಅವಕಾಶ ನೀಡುವಂತೆ ಕೇಳಿದ್ದರು.

ಅಯ್ಯಪ್ಪ ಭಕ್ತರ ಕೋರಿಕೆಗೆ ಸ್ಪಂದಿಸಿದ ಮಸೀದಿ ಆಡಳಿತ ಮಂಡಳಿ, ಮಸೀದಿ ಬಳಿಯಲ್ಲೇ ಪೂಜೆ ಮಾಡಲು ಅವಕಾಶ ನೀಡಿ ಹಾಗೂ ಮಲಗಲು ವ್ಯವಸ್ಥೆಯನ್ನೂ ಮಾಡಿಕೊಟ್ಟು ಭಾವೈಕ್ಯತೆ ಮೆರೆದಿದ್ದಾರೆ.

ಐವರು ಅಯ್ಯಪ್ಪ ಭಕ್ತರು ರಾತ್ರಿ ಮಸೀದಿಯಲ್ಲೇ‌ ತಂಗಿ ಬೆಳಗ್ಗೆ ಶಬರಿಮಲೆಯತ್ತ ಪ್ರಯಾಣ ಮುಂದುವರಿಸಿದ್ದಾರೆ.   ಮಸೀದಿ ಧರ್ಮಗುರುಗಳು ಹಾಗೂ ಮಸೀದಿ ಆಡಳಿತ ಮಂಡಳಿಯ ಈ ನಿರ್ಣಯಕ್ಕೆ  ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ