ಝಾಕೀರ್ ನಾಯಕ್ ರನ್ನು ಹಸ್ತಾಂತರಿಸೋ ಪ್ರಸ್ತಾಪವನ್ನು ಮೋದಿ ಮಾಡಿಲ್ಲ: ಮಲೇಷ್ಯಾದ ಪ್ರಧಾನಿ ಹೇಳಿಕೆ - Mahanayaka

ಝಾಕೀರ್ ನಾಯಕ್ ರನ್ನು ಹಸ್ತಾಂತರಿಸೋ ಪ್ರಸ್ತಾಪವನ್ನು ಮೋದಿ ಮಾಡಿಲ್ಲ: ಮಲೇಷ್ಯಾದ ಪ್ರಧಾನಿ ಹೇಳಿಕೆ

21/08/2024


Provided by

ಡಾ.ಝಾಕೀರ್ ನಾಯಕ್ ಅವರನ್ನು ಹಸ್ತಾಂತರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನನ್ನಲ್ಲಿ ಪ್ರಸ್ತಾಪವನ್ನೇ ಮಾಡಿಲ್ಲ ಎಂದು ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಹೇಳಿದ್ದಾರೆ. ಅನ್ವರ್ ಇಬ್ರಾಹಿಂ ಅವರು ಭಾರತಕ್ಕೆ ಭೇಟಿ ನೀಡಿದ್ದು ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿಯ ಬಗ್ಗೆ ಮಾತಾಡಿದ್ದಾರೆ.

2016ರಲ್ಲಿ ಜಕೀರ್ ನಾಯಕ್ ಅವರು ಭಾರತವನ್ನು ತೊರೆದಿದ್ದಾರೆ. ಅವರ ಮೇಲೆ ಹಣಕಾಸು ಅವ್ಯವಹಾರ ಮತ್ತು ದ್ವೇಷ ಭಾಷಣದ ಪ್ರಕರಣಗಳು ದಾಖಲಾಗಿದೆ.
2022ರಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಅನ್ವರ್ ಇಬ್ರಾಹಿಂ ಅವರ ಮೊದಲ ಭಾರತ ಭೇಟಿ ಇದಾಗಿದೆ.

ಅವರು ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಖಂಡಿಸಿದ್ದಾರೆ ಮತ್ತು ಈ ವಿಷಯದಲ್ಲಿ ಪಶ್ಚಿಮದ ಹಿಪಾಕ್ರಸಿಯನ್ನು ಪ್ರಶ್ನಿಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿಯನ್ನು ಖಂಡಿಸುವ ಪಶ್ಚಿಮ ರಾಷ್ಟ್ರಗಳು ಫೆಲೆಸ್ತೀನಿ. ನ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯ ಬಗ್ಗೆ ಮೌನವಾಗಿರುವುದು ಅವರ ಹಿಪಾಕ್ರಸಿಯನ್ನು ತೋರಿಸುತ್ತಿದೆ ಎಂದವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ