80 ಜನರಿಗೆ 8 ಕೋಟಿ ನಾಮ ಹಾಕಿ ಪರಾರಿಯಾದ | ಅಧಿಕ ಗಳಿಸುವ ಆಸೆ ತೋರಿಸಿ ಇದ್ದದ್ದನ್ನೂ ದೋಚಿದ
ನವದೆಹಲಿ: ಭಾರತದಾದ್ಯಂತ ಸುಮಾರು 80ಕ್ಕೂ ಅಧಿಕ ಜನರಿಗೆ ಸುಮಾರು ₹8 ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 41 ವರ್ಷ ವಯಸ್ಸಿನ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಗೋಪಾಲ್ ದಳಪತಿ ಬಂಧಿತ ಆರೋಪಿಯಾಗಿದ್ದಾನೆ. ಮೋಸದ ಹೂಡಿಕೆಯ ಯೋಜನೆಗಳ ಆರೋಪದಲ್ಲಿ ಈತನನ್ನು ಬಂಧಿಸಲಾಗಿದ್ದು, ಹೆಚ್ಚಿನ ಆದಾಯವನ್ನು ಗಳಿಸುವ ಆಸೆ ತೋರಿಸಿ, ಹೂಡಿಕೆ ಮಾಡಿಸಿ, ಜನರನ್ನು ಮೋಸ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಹೀಗೆ ಮೋಸ ಹೋದವರ ಪೈಕಿ 80 ಜನರು ಇದ್ದು, ಒಟ್ಟು 8 ಕೋಟಿ ರೂ.ಗಳನ್ನು ಈತ ವಂಚಿಸಿದ್ದಾನೆ.
ಸಂಸ್ಥೆಯೊಂದನ್ನು ನೋಂದಾಯಿಸಿ, ಹಣ ಹೂಡಿಕೆ ಮಾಡಿಸಿ, ಹೆಚ್ಚು ಆದಾಯ ಬರುವಂತೆ ಮಾಡುತ್ತೇವೆ ಎಂದು ನಂಬಿಸುತ್ತಿದ್ದರು. ಹಣ ಹೂಡಿಕೆಯಾದ ಬಳಿಕ ತಮ್ಮ ಕೋಲ್ಕತ್ತಾ ಹಾಗೂ ದೆಹಲಿಯ M/s weird Infrastructure Corporation Ltd & Weird Industries Ltd. ನ ಕಚೇರಿಗಳನ್ನು ಮುಚ್ಚಿದ್ದಾರೆ. ಆ ಬಳಿಕ ನಾಪತ್ತೆಯಾಗಿದ್ದರು.
ಗೋಪಾಲ್ ದಳಪತಿ ಈ ರೀತಿಯ ವಂಚನೆಗಳಿಗಾಗಿ ಪೊಲೀಸರಿಗೆ ಬೇಕಾದ ಆರೋಪಿಯಾಗಿದ್ದಾನೆ. ಈಗಾಗಲೇ ಈತನ ಮೂವರು ಸಹಚರರಾದ ಅಮರೇಂದ್ರ ಪ್ರಸಾದ್ ಸಿಂಗ್, ಭಾರತ್ ಕುಮಾರ್ ಮತ್ತು ಸಂಜಯ್ ಕುಮಾರ್ ದಾಸ್ ಎಂಬವರನ್ನು ಬಂಧಿಸಲಾಗಿದೆ.