ಗೋಮಾಂಸ ಸೇವನೆ ಆರೋಪ: ಸ್ವಘೋಷಿತ ಗೋರಕ್ಷಕರಿಂದ ವ್ಯಕ್ತಿಯ ಬರ್ಬರ ಕೊಲೆ - Mahanayaka
10:14 PM Wednesday 22 - October 2025

ಗೋಮಾಂಸ ಸೇವನೆ ಆರೋಪ: ಸ್ವಘೋಷಿತ ಗೋರಕ್ಷಕರಿಂದ ವ್ಯಕ್ತಿಯ ಬರ್ಬರ ಕೊಲೆ

31/08/2024

ಹರಿಯಾಣದ ದಾದ್ರಿ ಎಂಬಲ್ಲಿ ಗೋಮಾಂಸ ಸೇವನೆಯ ಶಂಕೆಯಲ್ಲಿ ಓರ್ವನನ್ನು ಕೊಲೆ ಮಾಡಲಾಗಿದೆ. ಸ್ವಘೋಷಿತ ಗೋರಕ್ಷಕರು ಪಶ್ಚಿಮ ಬಂಗಾಳ ಮೂಲದ 26 ವರ್ಷದ ಸಬೀರ್ ಎಂಬ ವಲಸಿಗ ಗುಜರಿ ವ್ಯಾಪಾರಿಯನ್ನು ಹತ್ಯೆ ಮಾಡಿದ್ದಾರೆ.

ಆಗಸ್ಟ್ 27 ರ ಬೆಳಿಗ್ಗೆ ಯುವಕರ ಗುಂಪೊಂದು ಬದ್ರಾ ಗ್ರಾಮದ ಬಳಿಯ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿದ್ದ ಗುಜರಿ ವ್ಯಾಪಾರಿ ಸಬೀರ್ ಬಳಿಗೆ ಬಂದು, ಸ್ಥಳೀಯ ಬಸ್ ನಿಲ್ದಾಣಕ್ಕೆ ಕರೆದೊಯ್ದರು. ಆರೋಪಿಗಳು ಅಸ್ಸಾಂ ಮೂಲದ ಅಸಿರುದ್ದೀನ್ ಎಂಬ ಮತ್ತೊಬ್ಬ ವಲಸಿಗನನ್ನು ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬಂದಿದ್ದರು.

ಅವರು ಗೋಮಾಂಸ ತಿಂದಿದ್ದಾರೆಂದು ಎಂದು ಶಂಕಿಸಿ ಇಬ್ಬರು ಸಂತ್ರಸ್ತರನ್ನು ಥಳಿಸಿದ್ದಾರೆ ಎಂದು ಚಾರ್ಖಿ ದಾದ್ರಿ ಎಸ್ಪಿ ಪೂಜಾ ವಶಿಷ್ಠ ತಿಳಿಸಿದ್ದಾರೆ.

ಈ ಗುಂಪು ಇಬ್ಬರನ್ನು ಥಳಿಸುತ್ತಿದ್ದಾಗ ಮಧ್ಯಪ್ರವೇಶಿಸಿದ ಜನರು ದಾಳಿಯ ವೀಡಿಯೊ ಮಾಡಿದ್ದಾರೆ. ಆದರೆ ಅದನ್ನು ಪೊಲೀಸರಿಗೆ ವರದಿ ಮಾಡಲಿಲ್ಲ ಎಂದು ಎಸ್ಪಿ ವಶಿಷ್ಠ ಹೇಳಿದರು.

ದಾರಿಹೋಕರು ಮಧ್ಯಪ್ರವೇಶಿಸಿದಾಗ, ಆರೋಪಿಗಳು ತಮ್ಮ ಬೈಕ್ ನಲ್ಲಿ ಇಬ್ಬರನ್ನು ಬೇರೆ ಸ್ಥಳಕ್ಕೆ ಕರೆದೊಯ್ದರು. ಭಂಡ್ವಾ ಗ್ರಾಮದ ಕಾಲುವೆ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಸಬೀರ್ ಪತ್ತೆಯಾಗಿದ್ದಾರೆ. ಅಸಿರುದ್ದೀನ್ ರನ್ನು ಮತ್ತೊಂದು ಸ್ಥಳದಲ್ಲಿ ಎಸೆದಿದ್ದು, ಅವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು FIR ನಲ್ಲಿ ತಿಳಿಸಿದ್ದಾರೆ.

ಸಬೀರ್ ಅವರು ಪತ್ನಿ ಮತ್ತು ಎರಡು ವರ್ಷದ ಮಗಳನ್ನು ಅಗಲಿದ್ದಾರೆ. ಆರೋಪಿಗಳನ್ನು ಅಭಿಷೇಕ್, ರವೀಂದರ್, ಮೋಹಿತ್, ಕಮಲಜೀತ್ ಮತ್ತು ಸಾಹಿಲ್ ಎಂದು ಗುರುತಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ