ಕೈಹಿಡಿದ ಕೈಯನ್ನೇ ಕಡಿದ: ಪ್ರೀತಿಸಿ ಮದ್ವೆಯಾಗಿದ್ದ ಪತ್ನಿಯನ್ನೇ ಕತ್ತು ಹಿಸುಕಿ ಕೊಂದ ಪತಿ
ಅಂಕುರ್ ಚೌಹಾಣ್ ಎಂಬಾತ ತಾನು ಪ್ರೀತಿಸಿ ಮದುವೆಯಾಗಿದ್ದ ಸಬಿಹಾ ಎಂಬಾಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಗಗನ್ ಚೌರಾಹನಲ್ಲಿ ನಡೆದಿದೆ. ಸಬಿಯಾಳನ್ನು ಸಾಕ್ಷಿಯಾಗಿ ಮತಾಂತರ ಮಾಡಲಾಗಿತ್ತು. ದಂಪತಿಗೆ 7 ವರ್ಷದ ಮಗಳು ಇದ್ದಾಳೆ.
ಠಾಕೂರ್ದ್ವಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಸುರ್ಜನ್ ನಗರದ ನಿವಾಸಿ ಸಬಿಹಾ ಖಾತೂನ್ ಅಲಿಯಾಸ್ ಸಾಕ್ಷಿ ಚೌಹಾಣ್ ಒಂಬತ್ತು ವರ್ಷಗಳ ಹಿಂದೆ ಗ್ರಾಮದ ಅಂಕುರ್ ಚೌಹಾಣ್ ನನ್ನು ಪ್ರೀತಿಸಿ ಮದುವೆಯಾಗಿದ್ದರು. ಆ ಬಳಿಕ ಇಬ್ಬರು ಮಜೋಲಾ ಪ್ರದೇಶದ ಗಗನ್ ಚೌರಾಹಾನಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸಲು ಪ್ರಾರಂಭಿಸಿದ್ದರು.
ಅಂಕುರ್ ಚೌಹಾಣ್ ಆರಂಭದಲ್ಲಿ ಕೆಲಸಕ್ಕೆ ಹೋಗುತ್ತಿದ್ದ, ಆದರೆ ಕಾಲ ಕ್ರಮೇಣ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿ ಪತ್ನಿಯನ್ನೇ ಕೆಲಸಕ್ಕೆ ಕಳುಹಿಸುತ್ತಿದ್ದ. ಸಾದಿಯಾ ಅಲಿಯಾಸ್ ಸಾಕ್ಷಿ ಕಾರ್ಖಾನೆಯ ಕೆಲಸದ ಒತ್ತಡದಿಂದ ಕೆಲವೊಮ್ಮೆ ಮನೆಗೆ ತಡವಾಗಿ ಬರುತ್ತಿದ್ದರು. ಈ ಬಗ್ಗೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಘಟನೆ ನಡೆದ ದಿನ ಅಂಕುರ್ ಸಾಕ್ಷಿಯೊಂದಿಗೆ ಜಗಳವಾಡಿದ್ದು, ಕೋಪಗೊಂಡು ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಮಗಳೊಂದಿಗೆ ಮನೆ ಬಿಟ್ಟು ಹೋಗಿದ್ದಾನೆ.
ರಾತ್ರಿ 12 ಗಂಟೆ ಸುಮಾರಿಗೆ ಮನೆಗೆ ಮರಳಿದ ಜಮೀನ್ದಾರ ಅಂಕುರ್ ಗೆ ಕರೆ ಮಾಡಿದ್ದಾನೆ. ಪ್ರತಿಕ್ರಿಯೆ ಬರದಿದ್ದಾಗ, ಭೂಮಾಲೀಕರು ಕೋಣೆಗೆ ಇಣುಕಿ ನೋಡಿದ್ದಾರೆ. ಸಾಕ್ಷಿಯ ಶವವು ಬಿದ್ದಿರುವುದು ನೋಡಿ, ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂಕುರ್ ಚೌಹಾಣನನ್ನು ಪೊಲೀಸರು ಬಂಧಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth