ಮಂಡ್ಯದಲ್ಲಿ ಮತ್ತೊಂದು ಭೀಕರ ಹತ್ಯೆ | ನಡುಬೀದಿಯಲ್ಲಿ ಮಾವನನ್ನು ಹತ್ಯೆ ಮಾಡಿದ ಅಳಿಯ - Mahanayaka
5:53 AM Thursday 7 - December 2023

ಮಂಡ್ಯದಲ್ಲಿ ಮತ್ತೊಂದು ಭೀಕರ ಹತ್ಯೆ | ನಡುಬೀದಿಯಲ್ಲಿ ಮಾವನನ್ನು ಹತ್ಯೆ ಮಾಡಿದ ಅಳಿಯ

11/12/2020

ಮಂಡ್ಯ: ತನ್ನ ಮಾವನನ್ನು ಅಳಿಯನೇ ನಡುಬೀದಿಯಲ್ಲಿ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯದ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ಮಂಡ್ಯ ಜಿಲ್ಲೆಯಲ್ಲಿ ಒಂದರ ಹಿಂದೊಂದರಂತೆ ಅಪರಾಧ ಪ್ರಕರಣಗಳು ನಡೆಯುತ್ತಿರುವುದರ ನಡುವೆಯೇ ಇದೀಗ 50 ವರ್ಷದ ಲಾರಿ ಚಾಲಕ ಸುರೇಶ್ ಎಂಬವರನ್ನು  ಅವರ ಅಳಿಯನೇ ನಡುರಸ್ತೆಯಲ್ಲಿಯೇ ಕೊಚ್ಚಿ ಕೊಲೆ ಮಾಡಿದ್ದಾನೆ.

ರಘು ಅಲಿಯಾಸ್ ಜಿಮ್ಮಿ ಹತ್ಯೆ ಆರೋಪಿಯಾಗಿದ್ದಾನೆ. ಈತ ಅರಕಲಗೂಡು ತಾಲೂಕಿನವನಾಗಿದ್ದಾನೆ. ಈತನಿಗೆ ಹತ್ಯೆಗೀಡಾದ ಸುರೇಶ್ ಅವರು 7 ವರ್ಷಗಳ ಹಿಂದೆ ತಮ್ಮ ಮಗಳನ್ನು ಮದುವೆ ಮಾಡಿಸಿದ್ದರು. ಆದರೆ ಸಂಸಾರ ಸರಿ ಹೊಂದದ ಹಿನ್ನೆಲೆಯಲ್ಲಿ ಇದೀಗ ಮಗಳು ತವರಿಗೆ ಬಂದಿದ್ದಾಳೆ. ತನ್ನ ಪತ್ನಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ರಘು ಮಾವನ ಜೊತೆಗೆ ಜಗಳವಾಡಿದ್ದ. ಸುರೇಶ್ ತಮ್ಮ ಮಗಳನ್ನು ಕಳುಹಿಸಲು ಒಪ್ಪಲಿಲ್ಲ ಎಂದು ಆಕ್ರೋಶಗೊಂಡ ರಘು ಗುರುವಾರ ರಾತ್ರಿ ಸುರೇಶ್ ಟಿ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ ವೇಳೆ ಕಂಠಮಟ್ಟ ಮದ್ಯ ಸೇವಿಸಿ ಬಂದು ಮಾವನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ