ಮನೆಯ ಮಾಲಿಕನನ್ನು ಕಟ್ಟಿ ಹಾಕಿ, ಪತ್ನಿಗೆ ಚೂರಿಯಿಂದ ಇರಿದು ದರೋಡೆ - Mahanayaka
12:04 AM Tuesday 16 - September 2025

ಮನೆಯ ಮಾಲಿಕನನ್ನು ಕಟ್ಟಿ ಹಾಕಿ, ಪತ್ನಿಗೆ ಚೂರಿಯಿಂದ ಇರಿದು ದರೋಡೆ

21/12/2020

ಉಪ್ಪಿನಂಗಡಿ: ದರೋಡೆಕೋರರ ತಂಡವೊಂದು ಮನೆಯ ಮಾಲಿಕನನ್ನು ಕಟ್ಟಿಹಾಕಿ ದರೋಡೆ ನಡೆಸಿದ್ದು, ಈ ವೇಳೆ ತಡೆಯಲು ಬಂದ ಮಾಲಿಕನ ಪತ್ನಿಗೆ ಚೂರಿಯಲ್ಲಿ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ.


Provided by

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೌಕ್ರಾರಿ ಗ್ರಾಮದ ಸೌತಡ್ಕ ಮಹಾಗಣಪತಿ ದೇವಾಲಯದ ಸಮೀಪದಲ್ಲಿ ಈ ಘಟನೆ ನಡೆದಿದೆ. ಮನೆಗೆ ನುಗ್ಗಿದ ದರೋಡೆಕೋರರು ಮಾಲಿಕ ತುಕ್ರಪ್ಪ ಶೆಟ್ಟಿ ಅವರನ್ನು ಕಟ್ಟಿ ಹಾಕಿ, ದರೋಡೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳಕ್ಕೆ  ದರೋಡೆಕೋರರನ್ನು ತಡೆಯಲು ಮುಂದಾದ ತುಕ್ರಪ್ಪ ಶೆಟ್ಟಿ ಅವರ ಪತ್ನಿ ಗೀತಾ ಅವರಿಗೆ ಚೂರಿಯಿಂದ ಇರಿಯಲಾಗಿದೆ.

ಚೂರಿ ಇರಿತದ ಪರಿಣಾಮ ಗೀತಾ ಶೆಟ್ಟಿ ಗಂಭೀರವಾಗಿ ಗಾಯಗೊಂಡಿದ್ದು,  ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ಶೋಧ ಆರಂಭಿಸಿದ್ದಾರೆ.

ಇತ್ತೀಚಿನ ಸುದ್ದಿ