ತೋಟದ ಮಾಲಿಕನ ಮಾತು ಕೇಳಿ ವಿದ್ಯುತ್ ಕಂಬ ಏರಿದ ಎಳೆಯ ಯುವಕ ಶಾಕ್ ಹೊಡೆದು ಮೃತ್ಯು! - Mahanayaka
3:25 AM Thursday 30 - November 2023

ತೋಟದ ಮಾಲಿಕನ ಮಾತು ಕೇಳಿ ವಿದ್ಯುತ್ ಕಂಬ ಏರಿದ ಎಳೆಯ ಯುವಕ ಶಾಕ್ ಹೊಡೆದು ಮೃತ್ಯು!

21/12/2020

ಶಿವಮೊಗ್ಗ: ತೋಟದ ಮಾಲಿಕನ ಮಾತು ಕೇಳಿ ವಿದ್ಯುತ್ ಕಂಬಕ್ಕೆ ಏರಿದ 19 ವರ್ಷದ ಯುವಕನೋರ್ವ  ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ ದಾರುಣ ಘಟನೆ ಭದ್ರಾವತಿ ತಾಲೂಕಿನ ಕಾಕನಕಟ್ಟೆ ಗ್ರಾಮದಲ್ಲಿ ನಡೆಸಿದೆ.

ಇನ್ನೂ ಬಾಳಿ ಬದುಕಬೇಕಿದ್ದ 19 ವರ್ಷದ ಸಂತೋಷ್ ಮೃತಪಟ್ಟ ಯುವಕನಾಗಿದ್ದಾನೆ. ತೋಟಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಸಂಬಂಧಪಟ್ಟವರಿಗೆ ದೂರು ನೀಡುವ ಬದಲು ತೋಟದ ಮಾಲಿಕ ವಿದ್ಯುತ್ ದುರಸ್ತಿಗೆ ಯಾವುದೇ ಮುಂಜಾಗೃತ ಕ್ರಮಗಳನ್ನೂ ತೆಗೆದುಕೊಳ್ಳದೇ ಈ ಎಳೆಯ ಯುವಕನನ್ನು ಕಂಬಕ್ಕೆ ಏರಿಸಿದ್ದಾನೆ. ವಿದ್ಯುತ್ ಕಂಬದ ಬಗ್ಗೆ ಏನೂ ತಿಳಿಯದ ಯುವಕ ತಂತಿಗೆ ಕೈ ಹಾಕಿದ್ದು, ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಇನ್ನೂ ಎಳೆಯ ಯುವಕನನ್ನು ವಿದ್ಯುತ್ ದುರಸ್ತಿಗೆ ಬಳಸಿಕೊಂಡು ಆತನ ಸಾವಿಗೆ ಕಾರಣವಾದ ಮಾಲಿಕನ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು,  ಮಾಲಿಕನ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.  ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಅಗ್ನಿಶಾಮಕ ದಳ ಹಾಗೂ ಗ್ರಾಮಾಂತರ ಪೊಲೀಸರು  ವಿದ್ಯುತ್ ಕಂಬದಲ್ಲಿ ನೇತಾಡುತ್ತಿರುವ ಸ್ಥಿತಿಯಲ್ಲಿದ್ದ ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಇತ್ತೀಚಿನ ಸುದ್ದಿ