ಸಹಜ ಸ್ಥಿತಿಗೆ ತಲುಪಿದ ಮಂಗಳೂರು - Mahanayaka

ಸಹಜ ಸ್ಥಿತಿಗೆ ತಲುಪಿದ ಮಂಗಳೂರು

mangalore
03/05/2025

ಮಂಗಳೂರು: ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆ ಶುಕ್ರವಾರ ಮಂಗಳೂರು ಬಂದ್ ಆಗಿತ್ತು. ಇದೀಗ ಶನಿವಾರ ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಸಹಜ ಸ್ಥಿತಿಗೆ ತಲುಪಿದೆ.

ನಿನ್ನೆ ಸಂಜೆಯಿಂದಲೇ ಮಂಗಳೂರಿನ ವಿವಿಧೆಡೆಗಳಲ್ಲಿ ಕೆಲವೊಂದು ಅಂಗಡಿಗಳು ತೆರೆದಿದ್ದವು. ಶುಕ್ರವಾರ ಬಂದ್ ನ ಸರಿಯಾದ ಮಾಹಿತಿ ಇಲ್ಲದ ಕಾರಣ ಸಾಕಷ್ಟು ಜನರು ತೊಂದರೆಗೀಡಾಗಿದ್ದರು. ಸಂಜೆ ವೇಳೆ ಅಲ್ಲಲ್ಲಿ ತೆರೆದಿರುವ ಅಂಗಡಿಗಳಿಗೆ ಜನರು ಅಗತ್ಯ ವಸ್ತುಗಳಿಗಾಗಿ ಮುಗಿಬಿದ್ದ ದೃಶ್ಯ ಕಂಡು ಬಂದಿತ್ತು.

ಇಂದು ಬೆಳಗ್ಗಿನಿಂದಲೇ ಸರ್ಕಾರಿ ಮತ್ತು ಖಾಸಗಿ ಬಸ್ ಗಳು ಸಂಚಾರ ಆರಂಭಿಸಿದೆ. ಆಟೋ, ಟೆಂಪೋ ಸೇರಿದಂತೆ ಎಲ್ಲ ವಾಹನಗಳು ರಸ್ತೆಗಿಳಿದಿವೆ. ಶುಕ್ರವಾರದ ಬಂದ್ ವೇಳೆ ಕೂಡ ವಾಹನ ಸಂಚಾರ ಹೆಚ್ಚು ಇತ್ತು. ಆದರೆ ಅಂಗಡಿಗಳು ತೆರೆದಿರಲಿಲ್ಲ.

ನಿನ್ನೆ ಬಂದ್ ನಿಂದಾಗಿ ಸಾಕಷ್ಟು ಜನರು ತೊಂದರೆಗೀಡಾಗಿದ್ದರು. ಏಕಾಏಕಿ ಮಂಗಳೂರಿನಲ್ಲಿ ಬಂದ್ ಆಚರಿಸಿರುವುದಕ್ಕೆ ಸಾಕಷ್ಟು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಗಲಾಟೆಗಳು ನಡೆಯಬಹುದು ಎನ್ನುವ ಭೀತಿಯಿಂದ ಸಾಕಷ್ಟು ಅಂಗಡಿಗಳ ಮಾಲಿಕರು ಅಂಗಡಿ ಬಂದ್ ಮಾಡಿರುವುದು ಕಂಡು ಬಂತು


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ