ಮಂಗಳೂರಿನ ಪ್ರೊಬೇಷನರಿ ಪೊಲೀಸ್ ಇನ್ಸ್ ಪೆಕ್ಟರ್ ಕೋಲಾರದಲ್ಲಿ ಕೊವಿಡ್ ಗೆ ಬಲಿ! - Mahanayaka

ಮಂಗಳೂರಿನ ಪ್ರೊಬೇಷನರಿ ಪೊಲೀಸ್ ಇನ್ಸ್ ಪೆಕ್ಟರ್ ಕೋಲಾರದಲ್ಲಿ ಕೊವಿಡ್ ಗೆ ಬಲಿ!

shamili
18/05/2021

ಕೋಲಾರ:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೊಬೇಷನರಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೋಲಾರ ಮೂಲದ ಶಾಮಿಲಿ ಅವರು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.

7 ತಿಂಗಳ ಗರ್ಭಿಣಿಯಾಗಿದ್ದ 24 ವರ್ಷ ವಯಸ್ಸಿನ ಶಾ ಕೊವಿಡ್ ಸೋಂಕು ತಗಲಿದ ಕಾರಣ ಮೇ 2ರಂದು ಕೋಲಾರ ಜಿಲ್ಲೆಯ ಆರ್.ಎಂ.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಗರ್ಭಿಣಿಯಾಗಿದ್ದ ಕಾರಣ ಶಾಮಿಲಿ ಅವರು ಕೊವಿಡ್ ಲಸಿಕೆ ಕೂಡ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ಹೇಳಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಇತ್ತೀಚಿನ ಸುದ್ದಿ