ಬೀಚ್ ನಲ್ಲಿ ಸಮುದ್ರ ಪಾಲಾಗಿದ್ದ ಮಣಿಪಾಲ ವಿದ್ಯಾರ್ಥಿಯ ಮೃತದೇಹ ಪತ್ತೆ - Mahanayaka
12:06 AM Thursday 21 - August 2025

ಬೀಚ್ ನಲ್ಲಿ ಸಮುದ್ರ ಪಾಲಾಗಿದ್ದ ಮಣಿಪಾಲ ವಿದ್ಯಾರ್ಥಿಯ ಮೃತದೇಹ ಪತ್ತೆ

udupi
27/09/2022


Provided by

ಮಲ್ಪೆ: ಹೂಡೆ ಬೀಚ್ ನಲ್ಲಿ ರವಿವಾರ ಸಂಜೆ ಸಮುದ್ರ ಪಾಲಾಗಿದ್ದ ಮಣಿಪಾಲ ವಿದ್ಯಾರ್ಥಿಯ ಮೃತದೇಹ ಇಂದು ಬೆಳಗಿನ ಜಾವ ಅಲ್ಲೇ ಸಮೀಪದಲ್ಲಿ  ಪತ್ತೆಯಾಗಿದೆ

ಮೃತರನ್ನು ಹೈದರಾಬಾದ್ ಮೂಲದ ವಿದ್ಯಾರ್ಥಿ ಶ್ರೀಕರ್(21) ಎಂದು ಗುರುತಿಸಲಾಗಿದೆ. ವಾರಂತ್ಯದ ಮಣಿಪಾಲದ ಐಸಿಎಎಸ್ ನ ಒಟ್ಟು  15 ಮಂದಿ ವಿದ್ಯಾರ್ಥಿ ಗಳು ಹೂಡೆ ಬೀಚ್ ಗೆ ಬಂದಿದ್ದರು  ಈ ವೇಳೆ ಸಮುದ್ರದಲ್ಲಿ ಆಡುತ್ತಿದ್ದಾಗ ಅಲೆಗಳ ಅಬ್ಬರಕ್ಕೆ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋದರೆ ಎನ್ನಲಾಗಿದೆ

ಅದರಲ್ಲಿ ಬೆಂಗಳೂರು ಮೂಲದ ಮಣಿಪಾಲದ ವಿದ್ಯಾರ್ಥಿಗಳಾದ ನಿಶಾಂತ್(21) ಹಾಗೂ ಷಣ್ಮುಗ(21) ಎಂಬವರನ್ನು  ರಕ್ಷಿಸಿ ಮೇಲಕ್ಕೆ ತರಲಾಯಿತು.  ತೀವ್ರವಾಗಿ ಅಸ್ವಸ್ಥಗೊಂಡು ಗಂಭೀರ ಸ್ಥಿತಿಯಲ್ಲಿದ್ದ ಇವರು  ಇಬ್ಬರು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.

ನಾಪತ್ತೆಯಾದ  ವಿದ್ಯಾರ್ಥಿಗಾಗಿ ಹುಡುಕಾಟ ತಡರಾತ್ರಿವರೆಗೂ ಮುಂದುವರಿಸಲಾಗಿತ್ತು ಸೆ.26ರಂದು ಬೆಳಿಗ್ಗೆ ಅಲ್ಲೇ ಸಮೀಪ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ