ಓಯೋ ರೂಮ್ ನಲ್ಲಿ ವಿವಾಹಿತ ಮಹಿಳೆಯ ಬರ್ಬರ ಹತ್ಯೆ!

ಬೆಂಗಳೂರು: ಓಯೋ ರೂಮ್ ನಲ್ಲಿ ಮಹಿಳೆಯನ್ನು 17 ಬಾರಿ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪೂರ್ಣ ಪ್ರಜ್ಞಾಲೇಔಟ್ನ ಹೋಟೆಲ್ ಓಯೋ ರೂಮ್ ನಲ್ಲಿ ನಡೆದಿದೆ.
ಟೆಕ್ಕಿ ಯಶಸ್ ಎಂಬಾತ ಹತ್ಯೆ ನಡೆಸಿದ ಆರೋಪಿಯಾಗಿದ್ದು, ಹರಿಣಿ(36) ಹತ್ಯೆಗೀಡಾದ ಮಹಿಳೆಯಾಗಿದ್ದಾರೆ. ಮೃತ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ. ಸದ್ಯ ಸುಬ್ರಹ್ಮಣ್ಯ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಗೃಹಿಣಿ ಹರಿಣಿ ಇದ್ದ ಏರಿಯಾ ಜಾತ್ರೆಗೆ ಟೆಕ್ಕಿ ಯಶಸ್ ಹೋಗಿದ್ದರು. ಈ ವೇಳೆ ಹರಿಣಿ ಪರಿಚಯವಾಗಿ ಫೋನ್ ನಂಬರ್ ಪಡೆದಿದ್ದರು. ಬಳಿಕ ಸ್ನೇಹ ಬೆಳೆದು ಚಾಟಿಂಗ್, ಡೇಟಿಂಗ್, ಸುತ್ತಾಟ ಮಾಡಿದ್ದರು. ಕೆಲವು ಸಲ ಇಬ್ಬರು ಲೈಂಗಿಕ ಸಂಪರ್ಕ ಕೂಡ ಬೆಳೆಸಿದ್ದರು. ಹಲವು ಬಾರಿ ಇದೇ ರೀತಿ ಭೇಟಿಯಾಗಿ ಫೋನ್ ನಲ್ಲಿ ಮಾತಾಡುತ್ತಿದ್ದರು. ಈ ವೇಳೆ ಪತಿ ದಾಸೇಗೌಡನಿಗೆ ಪತ್ನಿಯ ಅನೈತಿಕ ಸಂಬಂಧ ಗೊತ್ತಾಗಿತ್ತು. ಹರಿಣಿ ಫೋನ್ ಕಿತ್ಕೊಂಡಿದ್ದ ದಾಸೇಗೌಡ ಮನೆಯಲ್ಲೇ ಕೂಡಿ ಹಾಕಿದ್ದರು.
ಬಳಿಕ ಕೆಲವು ತಿಂಗಳ ನಂತರ ಮತ್ತೆ ಹೊರ ಬಂದಿದ್ದ ಹರಿಣಿ, ಈ ವೇಳೆ ತನ್ನ ಬಾಯ್ ಫ್ರೆಂಡ್ ಯಶಸ್ ಸಂಪರ್ಕಿಸಿದ್ದಾರೆ. ಇತ್ತ ಹರಿಣಿ ಸಂಪರ್ಕಕ್ಕೆ ಸಿಗದೇ ಹುಚ್ಚನಂತೆ ಆಗಿದ್ದ ಪ್ರಿಯಕರ ಯಶಸ್, ಸಿಕ್ಕರೆ ಸಾಯಿಸಲು ನಿರ್ಧರಿಸಿದ್ದ. ಹೀಗಾಗಿ ಹರಿಣಿಯನ್ನು ಕೊಲೆ ಮಾಡಲು ಚಾಕು ಕೂಡ ಖರೀದಿಸಿದ್ದ.
ಜೂನ್ 6ರಂದು ಮಾತುಕತೆ ನಡೆಸಿ ಇಬ್ಬರು ಹೋಟೆಲ್ಗೆ ಹೋಗಿದ್ದರು. ಮೊದಲೇ ರಾಯಲ್ಸ್ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿದ್ದ ಯಶಸ್, ಹೋಟೆಲ್ ಗೆ ಹೋಗಿ ಲೈಂಗಿಕ ಸಂಪರ್ಕ ಬೆಳೆಸಿದ್ದರು. ಬಳಿಕ ಚಾಕುವಿನಿಂದ ಇರಿದು ಹರಿಣಿಯನ್ನು ಹತ್ಯೆಗೈದಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಹರಿಣಿ ಅವೈಡ್ ಮಾಡಿದ್ದಕ್ಕೆ ಕೊಲೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: