ವಿಷ ಸೇವಿಸಿದ ಪರಿಣಾಮ ಕಿಲ್ಲೂರು ಮಸ್ಜಿದ್ ಮಾಜಿ ಅಧ್ಯಕ್ಷ ಬಿ.ಹೆಚ್.ಅಬ್ದುಲ್ ಹಮೀದ್ ಸಾವು
ಬೆಳ್ತಂಗಡಿ: ಸಾಲ ಬಾಧೆಗೊಳಗಾಗಿದ್ದ ಕಿಲ್ಲೂರು ಮಸ್ಜಿದ್ ಮಾಜಿ ಅಧ್ಯಕ್ಷ ಬಿ.ಹೆಚ್. ಅಬ್ದುಲ್ ಹಮೀದ್ (64) ಅವರು ನ.5 ರಂದು ವಿಷ ಸೇವಿಸಿದ್ದು, ನ.16 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ನ.5 ರಂದು ಸಂಜೆಯವರೆಗೆ ಮನೆಯಲ್ಲಿಯೇ ಇದ್ದ ಅವರು ಇಳಿ ಸಂಜೆ ಮನೆಯ ಪಕ್ಕದ ನೇತ್ರಾವತಿ ನದಿ ಕಿನಾರೆಯ ಅಲಂಜಿಕಟ್ಟ ಎಂಬಲ್ಲಿಗೆ ತೆರಳಿ ವಿಷ ಸೇವಿಸಿ ತೀವ್ರ ಅಸ್ವಸ್ಥರಾಗಿ ಬಿದ್ದಿದ್ದರು. ಗಂಭೀರಾವಸ್ಥೆಯಲ್ಲಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹಮೀದ್ ಅವರು ಕಿಲ್ಲೂರು ಮಸ್ಜಿದ್‌ನ ಅಧ್ಯಕ್ಷರಾಗಿ ಮಸೀದಿಯ ಸಮಗ್ರ ಅಭಿವೃದ್ಧಿ, ನೂತನ ಮದರಸ ಕಟ್ಟಡ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮೃತರು ಪತ್ನಿ ಐಸುಂಜ್ಞಿ, ಏಕೈಕ ಪುತ್ರ ಶಾಕಿರ್ ಮತ್ತು ಸಹೋದರರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka