ನಿದ್ದೆ ಮಾಡುತ್ತಿದ್ದ ಸೊಸೆಯ ಮೇಲೆ ಮಾವನಿಂದಲೇ ಹೀನ ಕೃತ್ಯ | ತನಿಖೆಯ ವೇಳೆ ಬಯಲಾಯ್ತು ರಹಸ್ಯ! - Mahanayaka

ನಿದ್ದೆ ಮಾಡುತ್ತಿದ್ದ ಸೊಸೆಯ ಮೇಲೆ ಮಾವನಿಂದಲೇ ಹೀನ ಕೃತ್ಯ | ತನಿಖೆಯ ವೇಳೆ ಬಯಲಾಯ್ತು ರಹಸ್ಯ!

30/12/2020


Provided by

ಮುಂಬೈ: ಸೊಸೆಯ ಮೇಲೆ ಸ್ವಂತ ಮಾವನೇ ನಡೆಸಿ ಕೃತ್ಯ ಮುಂಬೈ ಮಹಾನಗರವನ್ನು ಬೆಚ್ಚಿ ಬೀಳಿಸಿದ್ದು,  ತನ್ನ ಮಗ ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು  ಬರ್ಬರವಾಗಿ ಹತ್ಯೆ ನಡೆಸಿದ್ದಾನೆ.

 ಡಿಸೆಂಬರ್ 24ರಂದು  ಮುಂಬೈ ಮಹಾನಗರದ ಅಕ್ಷ ಬೀಚ್ ಸಮೀಪ ನಂದಿನಿ ಎಂಬ ಮಹಿಳೆಯ ಮೃತದೇಹ ನಾಲೆಯಲ್ಲಿ ಪತ್ತೆಯಾಗಿತ್ತು. ಮೃತದೇಹವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮಹಿಳೆಯ ಹಿನ್ನೆಲೆಯನ್ನು ಕೆದಕುತ್ತಾ ಹೋಗುತ್ತಿದ್ದಂತೆಯೇ ಹಲವು ಮಹತ್ವದ ಮಾಹಿತಿಗಳು ಲಭ್ಯವಾಗಿತ್ತು.

ಪಂಕಜ್ ಹಾಗೂ ನಂದಿನಿ ಮೂರು ವರ್ಷಗಳಿಂದಲೂ ಪ್ರೀತಿಸುತ್ತಿದ್ದರು. ಮದುವೆಯಾಗಲು ನಿರ್ಧರಿಸಿದಾಗ ಕಮಲ್ ನ ತಂದೆ ಈ ಮದುವೆಯನ್ನು ವಿರೋಧಿಸಿದ್ದ. ಆದರೂ ಪಂಕಜ್ ಹಾಗೂ ನಂದಿನಿ ವಿವಾಹವಾಗಿದ್ದರು. ಮದುವೆಯ ನಂತರ ಮಾವ ಕಮಲ್ ನಂದಿನಿಯ ವಿರುದ್ಧ ಆಗಾಗ ಕಾರುತ್ತಲೇ ಇದ್ದ. ಇದರ ಜೊತೆಗೆ ಮಗ ಸೊಸೆಯ ಸಂಬಂಧವನ್ನು ಹಾಳು ಮಾಡಲೂ ಪ್ರಯತ್ನಿಸಿದ್ದ. ಆದರೆ ಇದ್ಯಾವುದು ಕೂಡ ಯಶಸ್ವಿಯಾಗಿರಲಿಲ್ಲ.

ಡಿಸೆಂಬರ್ 9ರಂದು ಸೊಸೆಯ ಹತ್ಯೆ ಮಾಡಲು ಯೋಜನೆ ರೂಪಿಸಿದ್ದ  ಮಾವ ಕಮಲ್, ತನ್ನ ಮಗ ಪಂಕಜ್ ಕೆಲಸಕ್ಕೆ ಹೋಗುವುದನ್ನೇ ಕಾಯುತ್ತಿದ್ದ.  ಯಾರೂ ಇಲ್ಲದ ಸಂದರ್ಭ ಸೊಸೆಯ ರೂಮಿಗೆ ಹೋದ ಕಮಲ್ ತನ್ನ ಇಬ್ಬರು ಸಹಚಾರರ ನೆರವಿನೊಂದಿಗೆ ಆಕೆಯ ಕೈಕಾಲುಗಳನ್ನು ಕಟ್ಟಿಹಾಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದು, ಬಳಿಕ ನಾಲೆಯೊಂದಕ್ಕೆ ಮೃತದೇಹವನ್ನು ಎಸೆದಿದ್ದಾನೆ.

ಮೃತದೇಹ ಪತ್ತೆಯಾದ ಬಳಿಕ ಪಂಕಜ್ ಮೃತದೇಹವನ್ನು ಗುರುತಿಸಿದ್ದಾನೆ. ಆ ಬಳಿಕ ತನಿಖೆ ನಡೆಸಿದ ಪೊಲೀಸರು ಮಾವ ಕಮಲ್ ನ ಕುಕೃತ್ಯವನ್ನು ಬಯಲಿಗೆಳೆದಿದ್ದಾರೆ.

ಇತ್ತೀಚಿನ ಸುದ್ದಿ