ನೂತನ ಸಚಿವರಿದ್ದ ವಿಮಾನದಲ್ಲಿ ಸ್ಫೋಟ |  26 ಪ್ರಯಾಣಿಕರ ದಾರುಣ ಸಾವು, 50ಕ್ಕೂ ಅಧಿಕ ಮಂದಿಗೆ ಗಾಯ - Mahanayaka
9:29 PM Wednesday 11 - September 2024

ನೂತನ ಸಚಿವರಿದ್ದ ವಿಮಾನದಲ್ಲಿ ಸ್ಫೋಟ |  26 ಪ್ರಯಾಣಿಕರ ದಾರುಣ ಸಾವು, 50ಕ್ಕೂ ಅಧಿಕ ಮಂದಿಗೆ ಗಾಯ

31/12/2020

ಅಡೆನ್: ಸಂಪುಟ ಸಚಿವರಿದ್ದ ವಿಮಾನ ಸ್ಫೋಟಗೊಂಡು ಕನಿಷ್ಠ 26 ಮಂದಿ ಸಾವನ್ನಪ್ಪಿ 50ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಬುಧವಾರ ಯೆಮೆನ್ ನಲ್ಲಿ ನಡೆದಿದೆ.

ಇರಾನ್ ಬೆಂಬಲಿತ  ‘ಹುತಿ’ ಬಂಡುಕೋರರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಕೆಲವೇ ಅಂತರಗಳಲ್ಲಿ  2 ಬಾರಿ ಬಾಂಬ್ ಸ್ಫೋಟಗೊಂಡಿದೆ.  ಮೊದಲು   ವಿಮಾನ ನಿಲ್ದಾಣದ ಟರ್ಮಿನಲ್ ನಲ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದು, ಹೊಗೆ ತುಂಬಿಕೊಂಡಿತ್ತು. ರಕ್ಷಣಾ ಕಾರ್ಯಕ್ಕೆಂದು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದಾಗ ಮತ್ತೊಂದು ಸ್ಪೋಟವಾಗಿದೆ. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಿಮಾನದಲ್ಲಿದ್ದ ಸಚಿವರೆಲ್ಲರೂ ಸುರಕ್ಷಿತವಾಗಿದ್ದಾರೆ. ಆದರೆ ಇತರ 26 ಪ್ರಯಾಣಿಕರು ಸಾವನ್ನಪ್ಪಿದ್ದು, 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳು ಕೂಡ ಇದೆ ಎಂದು ಹೇಳಲಾಗಿದೆ.


Provided by

ಯೆಮನ್‌ನ ಪ್ರಧಾನಿ ಮೊಯೀನ್‌ ಅಬ್ದುಲ್‌ಮಲಿಕ್‌ ಸಯೀದ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇದೊಂದು ಹೇಡಿತನದ ಕೃತ್ಯವಾಗಿದೆ. ಭಯೋತ್ಪಾದಕ ದಾಳಿ ಯೆಮೆನ್ ಜನರ ವಿರುದ್ಧ ನಡೆದ ಯುದ್ಧದ ಭಾಗವಾಗಿದೆ.  ತನಿಖೆ ಪ್ರಗತಿಯಲ್ಲಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ