ಮೀನಿನ ಕಂಟೈನರ್ ನಲ್ಲಿ 200 ಕೆ.ಜಿ. ಗಾಂಜಾ ಸಾಗಾಟ | ಮಂಗಳೂರಿನಲ್ಲಿ ಸಿಕ್ಕಿ ಬಿದ್ದ ಆರೋಪಿಗಳು
ಮಂಗಳೂರು: ಮೀನಿನ ಕಂಟೈನರ್ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ 20 ಕೆ.ಜಿ. ಗಾಂಜಾವನ್ನು ಉಳ್ಳಾಲ ಠಾಣಾ ಪೊಲೀಸರು ಪತ್ತೆ ಹಚ್ಚಿದ್ದು, ಬಂಧಿತರಿಂದ ನಾಲ್ಕು ಲಾಂಗ್, ತಲವಾರು, ಒಂದು ಕಾರು ಹಾಗೂ ಮೀನಿನ ಕಂಟೈನರ್ ಲಾರಿ, ವೈಫೈ ಸೆಟ್ ಗಳು ಹಾಗೂ ನಾಲ್ಕು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರದ ವಿಶಾಖಪಟ್ಟಣ ಜಿಲ್ಲೆಯ ಟೂನಿ ಎಂಬಲ್ಲಿಂದ ಕರ್ನಾಟಕದ ಹಾಸನದ ಮೂಲಕ ಮಂಗಳೂರು ಮಾರ್ಗವಾಗಿ ತರಲಾಗಿದ್ದು, ಮಂಗಳೂರು ಮತ್ತು ಕಾಸರಗೋಡು ಭಾಗಗಳಲ್ಲಿ ಮಾರಾಟ ಮಾಡಲು ಗಾಂಜಾವನ್ನು ತರಲಾಗಿದೆ ಎಂದ ಹೇಳಲಾಗಿದೆ. ಮಂಗಳೂರಿನ ಕೆ.ಸಿ.ರೋಡ್ ನ ಒಲವಿನಹಳ್ಳಿ ಕ್ರಾಸ್ ಬಳಿ ಪೊಲೀಸರು ಈ ತಂಡವನ್ನು ಸೆರೆ ಹಿಡಿದಿದ್ದಾರೆ.
ಈ ತಂಡವು 2012ರಿಂದಲೇ ಗಾಂಜಾ ಸಾಗಾಟದಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿದೆ. ಇವರು ಬಹಳ ವ್ಯವಸ್ಥಿತವಾಗಿ ಗಾಂಜಾ ವ್ಯವಹಾರ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ದಾಳಿಯ ವೇಳೆ ಕಾಸರಗೋಡಿನ ಮೊಹಮ್ಮದ್ ಫಾರೂಕ್, ಕೊಡಗು, ಕುಶಾಲನಗರದ ಸೈಯದ್ ಮೊಹಮ್ಮದ್, ಮಂಗಳೂರು ಮುಡಿಪುವಿನ ಮಹಮ್ಮದ್ ಅನ್ಸಾರ್ ಹಾಗೂ ಕಾಸರಗೋಡು ಮಂಜೇಶ್ವರದ ಮೊಯಿನುದ್ದೀನ್ ನವಾಝ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ರಾಜ್ಯದ ವಿವಿಧ ಕಡೆಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಸದ್ಯ ಪೊಲೀಸರು ತಮ್ಮ ಶೈಲಿಯಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದು, ಇನ್ನಷ್ಟು ಸತ್ಯಗಳು ತನಿಖೆಯ ವೇಳೆ ಬಹಿರಂಗಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.