ಮಂಗಳೂರು: ಮೀನುಗಾರಿಕಾ ಬೋಟ್ ಮಗುಚಿ, 6 ಮೀನುಗಾರರು ನಾಪತ್ತೆ - Mahanayaka
10:31 AM Tuesday 16 - September 2025

ಮಂಗಳೂರು: ಮೀನುಗಾರಿಕಾ ಬೋಟ್ ಮಗುಚಿ, 6 ಮೀನುಗಾರರು ನಾಪತ್ತೆ

01/12/2020

ಮಂಗಳೂರು:  ಬೋಳಾರದಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯು ಆಳ ಸಮುದ್ರದಲ್ಲಿ ಮಗುಚಿದ್ದು, ದೋಣಿಯಲ್ಲಿದ್ದ 6 ಮೀನುಗಾರರು ನಾಪತ್ತೆಯಾಗಿದ್ದಾರೆ.


Provided by

ಬೋಳಾರದ ಶ್ರೀರಕ್ಷಾ ಮೀನುಗಾರಿಕಾ ಬೋಟ್ ನಲ್ಲಿ 22 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ರಾತ್ರಿ ವಾಪಸ್ ಬರುವ ಸಂದರ್ಭದಲ್ಲಿ ಉಳ್ಳಾಲದ ಪಶ್ಚಿಮ ಭಾಗದ ನಾಟೆಕಲ್ ಮೈಲ್ ದೂರದಲ್ಲಿ ದೋಣಿ ಮಗುಚಿ ಬಿದ್ದಿದೆ.

14 ಮಂದಿ ದಡ ಸೇರಿದ್ದಾರೆ. 6 ಮಂದಿ ನಾಪತ್ತೆಯಾಗಿದ್ದಾರೆ.  ಘಟನಾ ಸ್ಥಳದಲ್ಲಿ ಇತರ ಮೀನುಗಾರರು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಅಧಿಕ ಮೀನಿನ ಸಂಗ್ರಹ ಅಥವಾ ವೇಗವಾದ ಗಾಳಿ ಬೀಸಿದ ಪರಿಣಾಮ ಬೋಟ್ ಮಗುಚಿದೆ ಎಂದು ಹೇಳಲಾಗಿದೆ.




 

ಇತ್ತೀಚಿನ ಸುದ್ದಿ